ಜನರೇ ನನ್ನ ಪರಿವಾರ, ಅವರ ಸುಖ-ದುಃಖಗಳೇ ನನ್ನ ಕುಟುಂಬದ ಸುಖ-ದುಃಖಗಳಿದ್ದಂತೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್​ನ ರಿಮೋಟ್ ಇರುವುದು ದೆಹಲಿಯ ಒಂದು ಕುಟುಂಬದ ಮನೆಯಲ್ಲಿ. ಜೆಡಿಎಸ್ ಒಂದು ಪರಿವಾರದ ಪ್ರೈವೆಟ್ ಲಿಮಿಟೆಡ್ ಕಂಪನಿ. ಆದರೆ ಮೋದಿಗೆ ಈ ಕುಟುಂಬ ರಾಜಕಾರಣ ಗೊತ್ತಿಲ್ಲ. ಜನರೇ ನನ್ನ ಪರಿವಾರ. ಜನರ ಸುಖ-ದುಃಖಗಳೇ ನನಗೆ ನನ್ನ ಕುಟುಂಬದ ಸುಖ-ದುಃಖಗಳಿದ್ದಂತೆ ಎಂದು ಪ್ರಧಾನಿ ಮೋದಿ ಹೇಳಿದರು.

ಬೆಳಗಾವಿಯ ಬೈಲಹೊಂಗಲದಲ್ಲಿ ಚುನಾವಣಾ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ಕೂಗು ರಾಜ್ಯದಾದ್ಯಂತ ಕೇಳಿ ಬರುತ್ತಿದೆ. ಬಿಜೆಪಿಗೆ ಬಹುಮತ ನೀಡಲು ರಾಜ್ಯದ ಜನ ತೀರ್ಮಾನಿಸಿದ್ದಾರೆ. ಕರ್ನಾಟಕದ ಜನರು ಸ್ಥಿರ ಸರ್ಕಾರ ತರಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಅಭಿವೃದ್ಧಿ ಎಂಬ ರಸ್ತೆಯಲ್ಲಿ ದೇಶ ಮುಂದೆ ಸಾಗುತ್ತಿದೆ. ಬಿಜೆಪಿ ಸರ್ಕಾರ ಪ್ರತಿಯೊಬ್ಬರ ಏಳಿಗೆಗೆ ಶ್ರಮಿಸುತ್ತಿದೆ. ಹೀಗಾಗಿ ಜನರು ಬಿಜೆಪಿ ಮೇಲೆ ವಿಶ್ವಾಸ ಇಟ್ಟಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯ ನೀಡಬೇಕು ಎಂಬುದು ಬಿಜೆಪಿಯ ಉದ್ದೇಶವಾಗಿದೆ ಎಂದು ಹೇಳಿದರು.

ಜೆಡಿಎಸ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್​ನದ್ದು ಶಾರ್ಟ್​ಕಟ್ ರಾಜಕೀಯ. ಈ ಬಗ್ಗೆ ಜನರು ಎಚ್ಚರಿಕೆಯಿಂದ ಇರಿ. ಈ ಎರಡು ಪಕ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ. ಬರೀ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿವೆ. ಸಮಾಜ ಒಡೆಯುತ್ತಾ, ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ ಹಾಗೂ ಜೆಡಿಎಸ್ ಪಕ್ಷಗಳು ಮಾಡುತ್ತಿವೆ ಎಂದು ಹೇಳಿದರು.

ಈ ರೀತಿಯ ಶಾರ್ಟ್​​ಕಟ್ ರಾಜಕಾರಣ ಮಾಡುವವರಿಗೆ ಪ್ರಾದೇಶಿಕ ಅಸಮಾನತೆ ಅರಿವು ಇರಲಿಲ್ಲ. ಆದರೆ ಈ ಅಸಮಾನತೆ ಹೋಗಲಾಡಿಸಿ, ಬಿಜೆಪಿ ಸಮತೋಲನದ ಆಡಳಿತ ಮಾಡುತ್ತಿದೆ. ಒಗ್ಗಟ್ಟಿನಲ್ಲಿ ಕರ್ನಾಟಕ ಸರ್ಕಾರದ ಭವಿಷ್ಯ ಇದೆ. ಆದರೆ ಕಾಂಗ್ರೆಸ್​ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ. ಕರ್ನಾಟಕದ ಜನತೆ ಇದರ ಬಗ್ಗೆ ಎಚ್ಚರವಾಗಿರಬೇಕು. ಜನತಾ ಜನಾರ್ಧನ ಎಂಬುದು ಬಹಳ ಅವಶ್ಯಕತೆ ಇದೆ. ಬಿಜೆಪಿ ಮತ್ತು ನಾನು ನಿಮ್ಮ ಸೇವಕನಂತೆ ಕೆಲಸ ಮಾಡುತ್ತಿದ್ದೇನೆ. ಆದರೆ ಕಾಂಗ್ರೆಸ್ ಸೇವೆ ದೆಹಲಿಯಲ್ಲಿನ ಕುಟುಂಬದ ಮೇಲೆ ಇದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಕರ್ನಾಟಕವನ್ನು ಅಭಿವೃದ್ಧಿ ಮಾಡಲು ಪಣ ತೊಟ್ಟಿದೆ. ಇಡೀ ಭಾರತದಲ್ಲಿ ಕರ್ನಾಟಕ ನಂ.1 ರಾಜ್ಯವಾಗಬೇಕು. ಬಿಜೆಪಿ ಮತ ಹಾಕಿದಾಗ ಕರ್ನಾಟಕವನ್ನು ದೇಶದಲ್ಲೇ ನಂಬರ್ 01 ರಾಜ್ಯವನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಇದರ ಭಾಗವಾಗಿ ಸದ್ಯ ರಾಜ್ಯದಲ್ಲಿ ವಿಮಾನ ನಿಲ್ದಾಣ, ಆಧುನಿಕ ರೈಲ್ವೇ ನಿಲ್ದಾಣಗಳು ನಿರ್ಮಾಣವಾಗುತ್ತಿವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!