Wednesday, August 10, 2022

Latest Posts

ಮೈಸೂರಿನ ಉದ್ಯಾನದಲ್ಲಿ ವಿಷ್ಣುವರ್ಧನ್ ಪ್ರತಿಮೆ ನಿರ್ಮಿಸಲು ಒತ್ತಾಯ

ಹೊಸದಿಗಂತ ವರದಿ, ಮೈಸೂರು:

ಹಿರಿಯ ಚಿತ್ರ ನಟ, ಸಾಹಸಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಪ್ರತಿಮೆಯನ್ನು ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಸಾಹಸಸಿಂಹ ಡಾ.ವಿಷ್ಣುವರ್ಧನ್ ಉದ್ಯಾನದಲ್ಲಿ ನಿರ್ಮಿಸಬೇಕೆಂದು ಒತ್ತಾಯಿಸಿ ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ಮೈಸೂರು ಮಹಾನಗರಪಾಲಿಕೆಯ ಮೇಯರ್ ಸುನಂದಾ ಪಾಲನೇತ್ರ, ಆಡಳಿತ ಪಕ್ಷದ ನಾಯಕ ಶಿವಕುಮಾರ್ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಡಾ. ವಿಷ್ಣುವರ್ಧನ್ ರವರು ಮೈಸೂರಿನ ಒಬ್ಬ ಪಂಚಭಾಷಾ ನಟ ಹಾಗೂ ಸುಮಾರು ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಸಮಾಜಕ್ಕೆ ಸ್ಫೂರ್ತಿಯಾಗಿದ್ದವರು. ಎಡಗೈನಿಂದ ಕೊಟ್ಟಿದ್ದು ಬಲಗೈಗೆ ಗೊತ್ತಿಲ್ಲ ಬಲಗೈಯಲ್ಲಿ ಕೊಟ್ಟಿದ್ದು, ಎಡಗೈಗೆ ಗೊತ್ತಿಲ್ಲದಂತ ಅಂತಹ ಮಹಾನ್ ನಟನ ಪ್ರತಿಮೆಯನ್ನು ನಿರ್ಮಾಣ ಮಾಡಲು ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಯಿತು.
ಉದ್ಯಾನದಲ್ಲಿ ಪ್ರತಿಮೆಯನ್ನು ನಿರ್ಮಿಸಲು ಹಲವಾರು ಬಾರಿ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ. ಡಾ. ವಿಷ್ಣುವರ್ಧನ್ ಉದ್ಯಾನವನಕ್ಕೆ ತಾತ್ಕಾಲಿಕವಾಗಿ ನಾಮಕರಣಗೊಂಡಿದು. ಅದನ್ನು ಶಾಶ್ವತವಾಗಿ ನಾಮಕರಣ ಮಾಡಬೇಕೆಂದು ಇದೇ ವೇಳೆ ಒತ್ತಾಯಿಸಲಾಯಿತು.
ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಾಕ್ಟರ್ ರಾಜ್ ಕುಮಾರ್ ಸಂಸ್ಥಾಪಕ ಅಧ್ಯಕ್ಷರು ರಾಮೇಗೌಡ ಡಾಕ್ಟರ್ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ, ಗಾಂಧಿ ಚೌಕ ಟ್ಯಾಕ್ಸಿ ಚಾಲಕರ ಸದಸ್ಯರು ಮುಬಾರಕ್, ಮಂಜು. ಮಹದೇವ್, ಲಕ್ಷ್ಮೀ ಟಾಕೀಸ್ ಡಬಲ್ ರೋಡ್ ವಿಷ್ಣು ಅಭಿಮಾನಿಗಳ ಬಳಗದ ಸದಸ್ಯರು. ಬಸವರಾಜು ,ಪಾಪು,ರಾಜು,ಪ್ರಸನ್ನ,ಚಿನ್ನ ಬೆಳ್ಳಿ ಸಿದ್ದಪ್ಪ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss