ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…… ……………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಲಾಕ್ಡೌನ್ ಹೆಸರಲ್ಲಿ ರಾಜ್ಯದ ಜನತೆಗೆ ಕೊಡಬೇಕಾಗಿರುವುದು ಲಾಠಿ ಏಟುಗಳನಲ್ಲ ಬದಲಾಗಿ ಆರೋಗ್ಯ, ಆರ್ಥಿಕ ಭದ್ರತೆಯನ್ನು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕರುಣೆ ಇಲ್ಲದ ರಾಜ್ಯ ಸರ್ಕಾರ ಜನರನ್ನು ಪೊಲೀಸರ ಮೂಲಕ ಥಳಿಸಿ ದುಂಡಾವರ್ತನೆ ತೋರಿಸುತ್ತಿದೆ. ಜನರನ್ನು ಥಳಿಸಿ ವಿಕೃತ ಸಂತೋಷ ಪಡುತ್ತಿರುವ ಈ ಸರ್ಕಾರಕ್ಕೆ ಮಾನವೀಯತೆಯಿಲ್ಲವೆ? ಪೊಲೀಸರಿಗೆ ಜನರನ್ನು ಅಟ್ಟಾಡಿಸಿಕೊಂಡು ಹೊಡೆಯಲು ಈ ಸರ್ಕಾರ ಸೂಚಿಸಿದೆಯೆ ಎಂಬುದನ್ನು ಪೊಲೀಸ್ ಮಹಾ ನಿರ್ದೇಶಕರು ಸ್ಪಷ್ಟಪಡಿಸಲಿ ಎಂದಿದ್ದಾರೆ.
ಯಡಿಯೂರಪ್ಪನವರೆ ನಿಮ್ಮ ಸರ್ಕಾರ ಜನರಿಗೆ ಇಲ್ಲಿಯವರೆಗೂ ಯಾವ ಪ್ಯಾಕೇಜ್ ಕೊಟ್ಟಿದೆ? ಕನಿಷ್ಟ ಪಕ್ಷ ನಿಮ್ಮ ಸರ್ಕಾರದಿಂದ ಬಡವರಿಗೆ ಆಹಾರದ ಕಿಟ್ ಕೊಡುವ ವ್ಯವಸ್ಥೆಯಾದರೂ ಆಗಿದೆಯೇ? ಎಂದು ಪ್ರಶ್ನಿಸಿದ್ದಾರೆ
ಮುಖ್ಯಮಂತ್ರಿಗಳೆ,’ಅಕ್ಕನ ಮಗಳು ಬಡವಾಗಬಾರದು, ಅಕ್ಕಿಯೂ ಖಾಲಿಯಾಗಬಾರದು’ ಎಂದರೆ ಹೇಗೆ? ಮೊದಲು ಬಡ ಜನರಿಗೆ ಸಹಾಯಧನ ಹಾಗೂ ಆಹಾರದ ಕಿಟ್ ಕೊಡುವ ವ್ಯವಸ್ಥೆ ಮಾಡಿ. ನಂತರ ನಿಮ್ಮ ಕಠಿಣ ಲಾಕ್ಡೌನ್ ಜಾರಿ ಮಾಡಿ. ಬಡವ ಒಪ್ಪೊತ್ತಿನ ಊಟವನ್ನು ದುಡಿದು ತಿನ್ನಬೇಕು. ದುಡಿಯುವವನ ಕೈ ಕಟ್ಟಿ ಹಾಕಿದರೆ, ಅವನೇನು ಮನೆಯಲ್ಲಿ ಮಣ್ಣು ತಿನ್ನಬೇಕೇ?
3
ಮುಖ್ಯಮಂತ್ರಿಗಳೆ,'ಅಕ್ಕನ ಮಗಳು ಬಡವಾಗಬಾರದು, ಅಕ್ಕಿಯೂ ಖಾಲಿಯಾಗಬಾರದು' ಎಂದರೆ ಹೇಗೆ?ಮೊದಲು ಬಡ ಜನರಿಗೆ ಸಹಾಯಧನ ಹಾಗೂ ಆಹಾರದ ಕಿಟ್ ಕೊಡುವ ವ್ಯವಸ್ಥೆ ಮಾಡಿ. ನಂತರ ನಿಮ್ಮ ಕಠಿಣ ಲಾಕ್ಡೌನ್ ಜಾರಿ ಮಾಡಿ.
ಬಡವ ಒಪ್ಪೊತ್ತಿನ ಊಟವನ್ನು ದುಡಿದು ತಿನ್ನಬೇಕು.
ದುಡಿಯುವವನ ಕೈ ಕಟ್ಟಿ ಹಾಕಿದರೆ, ಅವನೇನು ಮನೆಯಲ್ಲಿ ಮಣ್ಣು ತಿನ್ನಬೇಕೆ?— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 11, 2021