ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಬಂದ ಸಚಿವರ ಮೇಲೆ ಕೆಸರೆರಚಿ, ಕಲ್ಲು ತೂರಿದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಮಿಳುನಾಡಿನ ಪ್ರವಾಹಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳಿದ್ದ ಅರಣ್ಯ ಸಚಿವ ಪೊನ್ಮುಡಿ  ಮೇಲೆ ಜನರು ಕೆಸರು ಎರಚಿ ಕಲ್ಲು ತೂರಿರುವ ಘಟನೆ ನಡೆದಿದೆ.

ಅರಣ್ಯ ಸಚಿವ ಪೊನ್ಮುಡಿ, ಅವರ ಪುತ್ರ ಗೌತಮ ಸಿಕಾಮಣಿ ಮತ್ತು ಜಿಲ್ಲಾಧಿಕಾರಿ ಪಳನಿ ಇರುವೆಲ್ಪಟ್ಟು, ಪ್ರವಾಹಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದರು. ಅತಿವೃಷ್ಟಿ ಸಮಸ್ಯೆಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಹತಾಶರಾದ ಸಾರ್ವಜನಿಕರು, ಸಚಿವರು ಮತ್ತು ಅವರ ಪುತ್ರ ಹಾಗೂ ಜಿಲ್ಲಾಧಿಕಾರಿ ಮೇಲೆ ಕೆಸರು ಎರಚಿ ಭಾರಿ ಗಲಾಟೆ ನಡೆಸಿದರು.

ಇರುವೇಲ್ಪಟ್ಟು ಪ್ರದೇಶದ ತಿರುಚಿರಾಪಳ್ಳಿ-ಚೆನ್ನೈ ರಸ್ತೆಯಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅರಣ್ಯ ಸಚಿವ ಪೊನ್ಮುಡಿ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ಸ್ಥಳದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸದೆ ತಮ್ಮ ವಾಹನದಲ್ಲೇ ಕುಳಿತು ಸಚಿವರು ಮಾತನಾಡಿಸಿದ್ದಕ್ಕೆ ಜನರು ಸಿಟ್ಟಿಗೆದ್ದರು. ಕೆಲವರು ಸಚಿವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!