ಬಿಸಿಲ ಬೇಗೆಗೆ ತಂಪು ಪಾನೀಯದತ್ತ ಮೊರೆಹೋಗುತ್ತಿರುವ ಜನರು: ಇಲ್ಲಿ 1 ಕೆಜಿ ನಿಂಬೆಹಣ್ಣಿಗೆ ಬೆಲೆ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ದಿನೇ ದಿನೇ ಬೇಸಿಗೆಯ ಧಗೆ ಹೆಚ್ಚುತ್ತಿದ್ದು, ಜನರು ತಂಪು ಪಾನೀಯದತ್ತ ಮೊರೆಹೋಗುತ್ತಿದ್ದರೆ. ಜನರು ಹೆಚ್ಚಿನ ಪ್ರಮಾಣದಲ್ಲಿ ತಂಪು ಪಾನೀಯ ಸೇವಿಸಲು ಶುರುಮಾಡಿದ್ದಂತೆ ಬೆಲೆಯಲ್ಲೂ ಏರಿಕೆಯಾಗುತ್ತಿದೆ.
ಜನರು ದೇಹಕ್ಕೆ ತಂಪು ನೀಡುವ ನಿಂಬೆಹಣ್ಣಿಗೆ ಇದೀಗ ಭಾರೀ ಬೇಡಿಕೆ ಇದ್ದು, ಚಂಡೀಗಢದಲ್ಲಿ 1 ಕೆಜಿ ನಿಂಬೆಹಣ್ಣು 250 ರೂಪಾಯಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.
ಹೆಚ್ಚಿನ ಉಷ್ಣಾಂಶ ದಾಖಲಾದ ಕಾರಣ ಜನರು ತಂಪು ಪಾನೀಯದ ಮೊರೆ ಹೋಗುತ್ತಿರುವುದು ಅಧಿಕವಾಗಿದೆ. ಹೀಗಾಗಿ ನಿಂಬೆಹಣ್ಣಿನ ಬಳಕೆಯೂ ಹೆಚ್ಚಿದೆ. ಸಹಜವಾಗಿ ಈ ಸಮಯದಲ್ಲಿ ಒಂದು ಕೆಜಿ ನಿಂಬೆಹಣ್ಣಿನ ದರ ಸಗಟು ಮಾರುಕಟ್ಟೆಯಲ್ಲಿ 120- 130 ರೂ. ಇರುತ್ತಿತ್ತು. ಈ ಬಾರಿ ಅದು 250 ರೂ. ತಲುಪಿದೆ.
ಮಾರುಕಟ್ಟೆಯಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ನಿಂಬೆಹಣ್ಣು ದಾಸ್ತಾನು ಸಿಗದ ಕಾರಣ ಬೆಲೆ ಗಗನಮುಖಿಯಾಗಿದೆ. ಅಲ್ಲದೇ ಉತ್ಪಾದಕರೂ ಕೂಡ ನಿಂಬೆಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಇಟ್ಟಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!