ಬೀಳಗಿಯಲ್ಲಿ ʻಕಿತ್ತೂರು ರಾಣಿ ಚೆನ್ನಮ್ಮʼ ಅದ್ದೂರಿ ನಾಟಕವನ್ನು ಕಣ್ತುಂಬಿಕೊಂಡ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೊಟ್ಟಮೊದಲ ಬಾರಿಗೆ ಬಾಗಲಕೋಟೆ ಜಿಲ್ಲೆ ಬೀಳಗಿ ಮತ ಕ್ಷೇತ್ರದಲ್ಲಿ ಅದ್ಧೂರಿ ವೀರರಾಣಿ ಕಿತ್ತೂರು ಚೆನ್ನಮ್ಮ ಬೃಹತ್ ನಾಟಕ ಪ್ರದರ್ಶನ ಭಾನುವಾರ ರಾತ್ರಿ ನಡೆಯಿತು.

ಧಾರವಾಡದ ರಂಗಾಯಣದವರು ಈ ಐತಿಹಾಸಿಕ ನಾಟಕವನ್ನು ಬಹಳ ಸಮೃದ್ಧವಾಗಿ ಬೀಳಗಿ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟರು. ನಿಜವಾದ ಕುದುರೆ, ಆನೆ, ಒಂಟೆಗಳನ್ನು ವೇದಿಕೆ ಮೇಲೆ ತಂದು ಹಿಂದಿನ ಐತಿಹಾಸಿಕ ದಿನಗಳನ್ನು ಕಣ್ಣೆದಿರು ತಂದು ಬಹಳ ಯಶಸ್ವಿಯಾಗಿ ನಾಟಕವನ್ನು ಬೀಳಗಿ ಕ್ಷೇತ್ರದ ಜನರಿಗೆ ರಸದೌತಣ ನೀಡಿದರು.

ರಂಗಾಯಣದ ಈ ಒಂದು ಯೋಜನೆ ಬೀಳಗಿ ಮತ ಕ್ಷೇತ್ರದ ಜನರ ಹೃದಯವನ್ನು ಸೆಳೆಯಿತು. ಅಲ್ಲದೇ ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಮಹಾಮಾತೆಯ ರಾಜ್ಯಭಾರವನ್ನು ಕಣ್ಣಾರೆ ಕಂಡಂತೆ ಜನರು ಸಂತೋಷ ಪಟ್ಟರು.

ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರು, ಬೀಳಗಿ ಮತ ಕ್ಷೇತ್ರದ ಶಾಸಕರಾದ ಡಾ. ಮುರುಗೇಶ್ ನಿರಾಣಿ ಅವರ ನೇತೃತ್ವದಲ್ಲಿ ಧಾರವಾಡ ರಂಗಾಯಣದಿಂದ ವೀರ ರಾಣಿ ಕಿತ್ತೂರು ಚೆನ್ನಮ್ಮಳನ್ನು ಬೀಳಗಿ ಮತ ಕ್ಷೇತ್ರದ ಜನ ಕಣ್ತುಂಬಿಕೊಂಡರು.

ರಂಗಾಯಣ ಧಾರವಾಡದ ಈ ಮಹತ್ತರ ಪ್ರಯತ್ನಕ್ಕೆ ಸಚಿವ ನಿರಾಣಿ ಅವರು ರಂಗಾಯಣದ ಈ ಕಾರ್ಯ ಮೆಚ್ಚುವಂತಹುದು ಎಂದರು. ಮಹಾಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮಳ ಸಾಹಸ ಶೌರ್ಯ ಹಾಗೂ ಐತಿಹಾಸಿಕ ದಿನಗಳನ್ನು ನಮಗೆ ಉಣಬಡಿಸಿದ ಎಲ್ಲ ಕಲಾವಿದರಿಗೂ ಸಚಿವರು ಅಭಿನಂದನೆ ಸಲ್ಲಿಸಿದರು.

ಬೀಳಗಿ ಮತ ಕ್ಷೇತ್ರದ ಶಾಸಕರಾದ ನಿರಾಣಿ ಅವರ ನಿವಾಸದ ಬಳಿ ಈ ಒಂದು ಐತಿಹಾಸಿಕ ಪ್ರದರ್ಶನ ನಿನ್ನೆಯಿಂದ ಆರಂಭವಾಗಿದ್ದು ಇಂದು ಕೂಡ ಪ್ರದರ್ಶನ ನಡೆಯಲಿದೆ. ಸಂಜೆ 6 ಗಂಟೆಗೆ ಐತಿಹಾಸಿಕ ಪ್ರದರ್ಶನ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!