Saturday, June 10, 2023

Latest Posts

RECIPE| ಈ ಹವೆಗಂತೂ ಈ ಸಾರು ಬೇಕೇ..ಬೇಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಹವಾಮಾನದಲ್ಲಿ ಸಾಕಷ್ಟು ಏರುಪೇರುಗಳಿವೆ. ಚಳಿ, ಸೆಖೆ, ಮಳೆ ಎಲ್ಲವೂ ಒಟ್ಟಿಗೇ ಕಾಣಸಿಗುತ್ತದೆ. ಇದರಿಂದಾಗಿ ಮಾನವನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.

ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುವ ಶೀತ ಕೆಮ್ಮು ನೆಗಡಿಗೆ ಮನೆಮದ್ದಾಗಿ ಈ ಸಾರು ಕೆಲಸ ಮಾಡುತ್ತದೆ. ಈ ಸಾರನ್ನು ಹೀಗೆ ಕುಡಿಯಬಹುದು ಅಥವಾ ಅನ್ನಕ್ಕೆ ಸೇರಿಸಿಕೊಂಡು ಊಟ ಮಾಡಬಹುದು. ಇದು ತುಂಬಾ ರುಚಿಯಾಗಿರುತ್ತದೆ.

ಸಾರಿಗೆ ಬೇಕಾದ ಸಾಮಾಗ್ರಿಗಳು:

2 ಟಿ.ಚಮಚ ಕಾಳು ಮೆಣಸು, ಸ್ವಲ್ಪ ಜೀರಿಗೆ, 1/2 ಟೀಸ್ಪೂನ್ ಸಾಸಿವೆ, 1/2 ಟೀಸ್ಪೂನ್ ಜೀರಿಗೆ, 1 ಹಸಿರುಮೆಣಸಿನಕಾಯಿ, 5 – 6 ಕರಿಬೇವಿನ ಎಲೆ, ಇಂಗು ಒಂದು ದೊಡ್ಡ ಚಿಟಿಕೆ, 4 ಟೀಸ್ಪೂನ್ ಅಡುಗೆ ಎಣ್ಣೆ ಅಥವಾ ತುಪ್ಪ, ಅರಿಶಿನ ಪುಡಿ ಒಂದು ದೊಡ್ಡ ಚಿಟಿಕೆ, 1 ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು, ಬೆಲ್ಲ, 1 ಟೀಸ್ಪೂನ್ ಉಪ್ಪು, 1 ಟೀ ಸ್ಪೂನ್ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು.

ತಯಾರಿಸುವ ವಿಧಾನ:

ಮೊದಲು ಒಂದು ಕುಟ್ಟಾಣಿಯಲ್ಲಿ 2 ಟೀಸ್ಪೂನ್ ಕಾಳು ಮೆಣಸು ಮತ್ತು 1 ಟೀಸ್ಪೂನ್ ಜೀರಿಗೆಯನ್ನು ಜಜ್ಜಿಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ.  ಸಾಸಿವೆ ಸಿಡಿದ ಕೂಡಲೇ ಹಸಿರುಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಸೇರಿಸಿ ಹುರಿಯಿರಿ.  ಆಮೇಲೆ ಇಂಗು ಮತ್ತು ಅರಿಶಿನ ಪುಡಿ ಹಾಕಿ. ಬಳಿಕ ಹುಣಸೆರಸ ಹಾಕಿ ಕುದಿಸಿ.ಬಳಿಕ ಜಜ್ಜಿದ ಕಾಳುಮೆಣಸು ಮತ್ತು ಜೀರಿಗೆ ಸೇರಿಸಿ ಅಗತ್ಯವಿದ್ದಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. ಬಿಸಿ ಬಿಸಿ ಸಾರು ರೆಡಿ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!