ಇದೀಗ ಪೆಪ್ಸಿ ಸರದಿ: ನೂರಾರು ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿ ಸಿದ್ಧತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉದ್ಯೋಗಿಗಳ ಕಡಿತಕ್ಕೆ ಮತ್ತೊಂದು ಕಂಪನಿ ಸೇರಿಕೊಂಡಿದೆ ಅದೇ ಪೆಪ್ಸಿ ಕೋ. ಬಡಾ ಬಡಾ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡುತ್ತಿರುವ ಬೆನ್ನಲ್ಲೇ ಪೆಪ್ಸಿ ಕಂಪನಿ ಕೂಡ ಈಗ ಅದೇ ಹಾದಿಯಲ್ಲಿ ಸಾಗುತ್ತಿದೆ. ನೂರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮೆಮೊಗಳನ್ನು ಸಹ ನೀಡಿದೆ. ಆರ್ಥಿಕ ಹಿಂಜರಿತದಿಂದ ದೊಡ್ಡ ಕಂಪನಿಗಳು ಹೊಡೆತ ತಿಂದ ಹಿನ್ನೆಲೆಯಲ್ಲಿ ಮೆಟಾ, ಅಮೆಜಾನ್, ಹೆಚ್ ಪಿ, ಆ್ಯಪಲ್ ಸೇರಿದಂತೆ ಹಲವು ಟೆಕ್ ಕಂಪನಿಗಳೂ ತಮ್ಮ ಉದ್ಯೋಗಿಗಳಿಂದ ಮುಕ್ತಿ ಪಡೆಯುತ್ತಿವೆ. ಇದೀಗ ಪೆಪ್ಸಿ ಕೋ ಕಂಪನಿಯು ಉತ್ತರ ಅಮೇರಿಕಾದ ಸ್ಥಾವರದಲ್ಲಿರುವ ನೂರಾರು ಜನರನ್ನು ಮನೆಗೆ ಕಳುಹಿಸುತ್ತಿದೆ. ನ್ಯೂಯಾರ್ಕ್ ಮೂಲದ ಸ್ನ್ಯಾಕ್ಸ್ ಮತ್ತು ಡ್ರಿಂಕ್ಸ್ ಘಟಕಗಳಿಂದ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ.

ನೂರಾರು ಉದ್ಯೋಗಿಗಳನ್ನು ವಜಾಗೊಳಿಸಲು ತಯಾರಿ ನಡೆಸುತ್ತಿರುವ ಉತ್ತರ ಅಮೆರಿಕದ ಸ್ನ್ಯಾಕ್ ಅಂಡ್ ಬೆವರೇಜಸ್ ಘಟಕದಲ್ಲಿ ಉದ್ಯೋಗಿಗಳು ಸ್ವೀಕರಿಸಿದ ಆಂತರಿಕ ಮೆಮೊಗಳನ್ನು ಉಲ್ಲೇಖಿಸಿ ‘ವಾಲ್ ಸ್ಟ್ರೀಟ್’ ಜರ್ನಲ್ ಇದನ್ನು ಬಹಿರಂಗಪಡಿಸಿದೆ. ಸಂಸ್ಥೆಯನ್ನು ಹೆಚ್ಚು ಫ್ಲೆಕ್ಸಿಬಲ್ ಮಾಡುವ ಭಾಗವಾಗಿ ನೌಕರರಿಗೆ ಲೇಆಫ್ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಆದರೆ ಪೆಪ್ಸಿ ಇದನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ. ಹೆಚ್ಚಿದ ಸಕ್ಕರೆ, ಜೋಳ, ಆಲೂಗೆಡ್ಡೆ ಬೆಲೆಯ ಹೊರೆಯನ್ನು ಗ್ರಾಹಕರಿಗೆ ಕಂಪನಿ ವರ್ಗಾಯಿಸುತ್ತಿದೆ. ಬೆಲೆ ಏರಿಕೆಯ ಹೊರತಾಗಿಯೂ, ತನ್ನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಇನ್ನೂ ಪ್ರಬಲವಾಗಿವೆ ಎಂದು ಕಂಪನಿ ಹೇಳುತ್ತದೆ. ಹೀಗಿದ್ದೂ ನೌಕರರನ್ನು ಏಕೆ ತೆಗೆದುಹಾಕುತ್ತಿದೆ ಎಂಬುದನ್ನು ಮಾತ್ರ ಸ್ಪಷ್ಟಪಡಿಸುತ್ತಿಲ್ಲ.

ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಎಲೋನ್ ಮಸ್ಕ್ ಕೈಗೆ ಬಂದ ನಂತರ, ಉದ್ಯೋಗಿಗಳ ಕಡಿತವು ಇತರ ಕಂಪನಿಗಳಿಗೆ ಹರಡಿತು. ಫೇಸ್‌ಬುಕ್‌ನ ಮೂಲ ಕಂಪನಿ ಮೆಟಾ, ಅಮೆಜಾನ್, ಎಚ್‌ಪಿ ಮತ್ತು ಆಪಲ್ ಸೇರಿದಂತೆ ಹಲವು ಟೆಕ್ ಕಂಪನಿಗಳು ಸಹ ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಆರ್ಥಿಕ ಹಿಂಜರಿತ ಮತ್ತು ಮಾರುಕಟ್ಟೆಯ ಏರಿಳಿತಗಳಿಂದಾಗಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದೇವೆ ಎಂದು ಕಂಪನಿಗಳು ಹೇಳುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!