ಸಾಮಾಗ್ರಿಗಳು
ಆಲೂಗಡ್ಡೆ
ಉಪ್ಪು
ಖಾರದಪುಡಿ
ಗರಂ ಮಸಾಲಾ
ಸಾಂಬಾರ್ ಪುಡಿ
ಗೋಧಿಹಿಟ್ಟು
ಅಜ್ವೈನ್
ಚಿರೋಟಿ ರವೆ
ಎಣ್ಣೆ
ಮಾಡುವ ವಿಧಾನ
ಮೊದಲು ಆಲೂಗಡ್ಡೆಯನ್ನು ಬೇಯಿಸಿ ಅದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ ಇಡಿ
ನಂತರ ಗೋಧಿಹಿಟ್ಟಿಗೆ ಉಪ್ಪು, ಚಿರೋಟಿ ರವೆ, ಅಜ್ವೈನ್ ಹಾಕಿ ನೀರು ಹಾಕಿ ಕಲಸಿ
ನಂತರ ಸಣ್ಣದಾಗಿ ಲಟ್ಟಿಸಿ ಮಧ್ಯಕ್ಕೆ ಆಲೂಗಡ್ಡೆ ಇಡಿ, ನಂತರ ಇನ್ನೊಮ್ಮೆ ಲಟ್ಟಿಸಿ
ನಂತರ ಕಾದ ಎಣ್ಣೆಗೆ ಹಾಕಿ ಕರಿದರೆ ಆಲೂಪೂರಿ ರೆಡಿ