Sunday, April 18, 2021

Latest Posts

ಕ್ರೀಡಾಕೂಟದಲ್ಲಿ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ

ಹೊಸ ದಿಗಂತ ವರದಿ, ಮಡಿಕೇರಿ:

ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ವಿವಿಧ ಕ್ರೀಡಾಕೂಟದಲ್ಲಿ ಪೊನ್ನಂಪೇಟೆ ಹಳ್ಳಿಗಟ್ಟುವಿನ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಗೆಲುವು ಸಾಧಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಪಿ.ಯು ವಿದ್ಯಾರ್ಥಿನಿ ರಾಶಿ ಮುತ್ತಮ್ಮ ಹಾಗೂ ಜಿ.ಗಾಹ್ನವಿ ಬೋಪಣ್ಣ, ಫುಟ್ಬಾಲ್ ಸ್ಪರ್ಧೆಯಲ್ಲಿ ಪ್ರಲೀ ಬೋಜಮ್ಮ ಎ.ಪಿ, ಅದಿತಾ ಮುತ್ತಮ್ಮ ಬಿ.ಎಸ್. ಆಯ್ಕೆಯಾಗಿದ್ದಾರೆ.

ಕಬಡ್ಡಿ ಸ್ಪರ್ಧೆಯಲ್ಲಿ ಎ.ಎಸ್.ಅರ್ಜುನ್ ಪೊನ್ನಣ್ಣ, ಎಂ.ಡಿ.ತುಳಸಿ, ತಾನ್ಯ ಅಯ್ಯಪ್ಪ, ಕೆ.ಎ.ಮೊನೀಷ, ಕೆ.ಟಿ.ಚೋಂದಮ್ಮ, ಬ್ಯಾಸ್ಕೆಟ್ ಬಾಲ್ ಮತ್ತು ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಎಸ್.ಎ.ಕವೇರ್, ಎಂ.ಡಿ.ಜೋಯಪ್ಪ, ಪ್ರಲೀ ಬೊಜಮ್ಮ, ಅದಿತಾ ಮುತ್ತಮ್ಮ ಆಯ್ಕೆಯಾಗಿದ್ದಾರೆ.

ಟಿ.ಟಿ ಸ್ಪರ್ಧೆಯಲ್ಲಿ ನಿಹಾಲ್ ಆಲ್ಬಟ್, ಕೆ.ಎನ್.ಅರ್ಜುನ್ ಸೋಮಣ್ಣ, ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಎ.ಎಂ.ಮಯೂರ್, ಜಿ.ಗಾಯನ ಬೋಪಣ್ಣ, ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಚೋಂದಮ್ಮ ಕೆ.ಟಿ., ಹ್ಯಾಮರ್ ಥ್ರೋ ಮತ್ತು ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಮಿಲನ್ ಮುತ್ತಣ್ಣ, ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಜಿ.ಗಾಯನ ಬೋಪಣ್ಣ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಿ.ಐ.ಪಿ.ಯು.ಸಿ. ಪ್ರಾಂಶುಪಾಲೆ ಡಾ.ರೋಹಿಣಿ ತಿಮ್ಮಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಹರೀಶ್ ಕುಮಾರ್ ಹಾಗೂ ಉಪನ್ಯಾಸಕ ವೃಂದ ಹಾಜರಿದ್ದು ಅಭಿನಂದನೆ ಸಲ್ಲಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss