ಮನೆಯಲ್ಲಿ ಪೂಜೆ ಇರುತ್ತದೆ ಅಥವಾ ಎಲ್ಲಿಗಾದ್ರೂ ಟ್ರಿಪ್ ಹೊರಟಿರುತ್ತೀರಾ ಅದೇ ಸಮಯಕ್ಕೆ ನಿಮಗೆ ಪೀರಿಯಡ್ಸ್ ಡೇಟ್ ಬರುತ್ತದೆ. ಡಾಕ್ಟ್ರ ಹತ್ರಾ ಹೋಗಿ ಪೀರಿಯಡ್ಸ್ ಮುಂದೆ ಹೋಗುವುದಕ್ಕೆ ಮಾತ್ರೆ ತಗೋಳ್ತೀರಾ. ಪೀರಿಯಡ್ಸ್ ಮುಂದೆ ಹೋಗಲು ಆಥವಾ ಹಿಂದೆ ಬರಲು ಮಾತ್ರೆ ತೆಗೆದುಕೊಳ್ಳುವುದು ಎಷ್ಟು ಸರಿ? ಇದರಿಂದ ಏನು ಅಡ್ಡಪರಿಣಾಮವಿದೆ ನೋಡಿ..
ರಕ್ತ ಸ್ರಾವ:
ಪೀರಿಯಡ್ಸ್ ಮುಂದೆ ಹೋಗಲು ಮಾತ್ರೆ ತೆಗೆದುಕೊಂಡರೆ ಪೀರಿಯಡ್ಸ್ ಸಮಯದಲ್ಲಿ ಅತಿಯಾಗಿ ಬ್ಲೀಡಿಂಗ್ ಆಗುತ್ತದೆ.
ಮಾನಸಿಕ ಸ್ಥಿತಿ:
ಮಾನಸಿಕವಾಗಿ ವೀಕ್ ಇರುವವರು ಮಾತ್ರೆ ಸೇವಿಸಿ ಪಿರಿಯಡ್ಸ್ ಡಿಲೇ ಮಾಡಿಕೊಂಡರೆ ಮನಸ್ಥಿತಿ ಏರಿಳಿತವಾಗುವ ಸಾಧ್ಯತೆ ಇರುತ್ತದೆ.
ಹೊಟ್ಟೆ ನೋವು:
ಪಿರಿಯಡ್ಸ್ ಡಿಲೇ ಮಾತ್ರೆ ಸೇವಿಸಿದರೆ ಸಾಮಾನ್ಯವಾಗಿ ವಿಪರೀತ ಹೊಟ್ಟೆನೋವು ಆಗುತ್ತದೆ.
ವಾಂತಿ, ಬೇಧಿ:
ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪರಿಣಾಮ ಬೀರುತ್ತದೆ. ಕೆಲವರಿಗೆ 4 ದಿನವೂ ವಾಂತಿ, ಬೇಧಿಯಾಗಬಹುದು.
ಮೊಡವೆ:
ಸಮಯಕ್ಕೆ ಸರಿಯಾಗಿ ಪೀರಿಯಡ್ಸ್ ಆಗದಿದ್ದರೆ ಮೊಡವೆಗಳಾಗುವುದು ಸಾಮಾನ್ಯ. ನೀವು ಪೀರಿಯಡ್ಸ್ ಡಿಲೇ ಮಾತ್ರೆ ಸೇವಿಸಿ ಪೀರಿಯಡ್ಸ್ ಆದರೆ ಮೊಡವೆಗಳು ಹೆಚ್ಚುತ್ತವೆ.
ಇತರೆ ಸಮಸ್ಯೆ:
ಪ್ರತಿ ತಿಂಗಳು ಹೀಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಮುಂದೆ ಗಂಬೀರ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಲಿವರ್ ಕೂಡ ಡ್ಯಾಮೇಜ್ ಆಗುವ ಸಾಧ್ಯತೆ ಇದೆ.