ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸಲು ಅನುಮತಿ ಅಗತ್ಯ: ಯೋಗಿ ಆದಿತ್ಯನಾಥ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರ ಪ್ರದೇಶದಲ್ಲಿ ಇನ್ನುಮುಂದೆ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸಲು ಅನುಮತಿ ಪಡೆಯಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆದೇಶಿಸಿದ್ದಾರೆ.

ಈಕುರಿತು ಮಾತನಾಡಿರುವ ಅವರು “ಅನುಮತಿಯ ಮೇರೆಗೆ ಧಾರ್ಮಿಕ ಪ್ರದೇಶದಲ್ಲಿ ಧ್ವನಿ ವರ್ಧಕಗಳನ್ನು ಬಳಸಬೇಕು. ಆದರೆ ಧ್ವನಿವರ್ಧಕದ ಶಬ್ದವು ಆ ಪ್ರದೇಶದ ಆವರಣವನ್ನು ಬಿಟ್ಟು ಹೊರಬರುವಂತಿಲ್ಲ. ಹಾಗೂ ಯಾವುದೇ ಹೊಸ ಅನುಮತಿಗಳನ್ನು ನೀಡುವುದಿಲ್ಲ” ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ ನಲ್ಲಿ ಪೋಲೀಸರು ಧ್ವನಿವರ್ಧಕಗಳನ್ನು ನಿಷೇಧಿಸಿದ ಮೂರೇದಿನಗಳಲ್ಲಿ ಯೋಗಿ ಹೇಳಿಕೆಯನ್ನು ನೀಡಿದ್ದಾರೆ. ನಾಸಿಕ್‌ ನಲ್ಲಿ ಮಸೀದಿಗಳ ʼಆಜಾನ್‌ʼ ಗಿಂತ 15 ನಿಮಿಷ ಮೊದಲು ಮತ್ತು ನಂತರ ಹನುಮಾನ್‌ ಚಾಲೀಸಾ ಹಾಕದಂದೆ ನಿಷೇಧ ವಿಧಿಸಲಾಗಿತ್ತು. ಈಗ ಉತ್ತರ ಪ್ರದೇಶದಲ್ಲಿಯೂ ಯೋಗಿ ಆದೇಶ ಹೊರಡಿಸಿದ್ದಾರೆ.

ಈಕುರಿತು ಅವರು “ಪ್ರತಿಯೊಬ್ಬರಿಗೂ ಅವರ ಇಚ್ಛೆಯ ಪೂಜಾ ವಿಧಾನವನ್ನು ಆಯ್ಕೆಮಾಡುವ ಮತ್ತು ಅನುಸರಿಸುವ ಹಕ್ಕಿದೆ. ಅದರೆ ಅದರಿಂದ ಇತರರಿಗೆ ತೊಂದರೆಯಾಗಬಾರದು” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!