Friday, August 19, 2022

Latest Posts

ವೈಯಕ್ತಿಕ ಕಾರಣ: 4ನೇ ಟೆಸ್ಟ್​ ಪಂದ್ಯದಿಂದ ಜಸ್ಪ್ರೀತ್​ ಬುಮ್ರಾ ರಿಲೀಸ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಾರ್ಚ್​ 4ರಿಂದ ನಡೆಯಲಿರುವ ಇಂಗ್ಲೆಂಡ್ – ಭಾರತ 4ನೇ ಟೆಸ್ಟ್​ ಪಂದ್ಯದಿಂದ ಜಸ್ಪ್ರೀತ್​ ಬುಮ್ರಾ ಹೊರಗುಳಿಯಲಿದ್ದಾರೆ. ಕೆಲ ವೈಯಕ್ತಿಕ ಕಾರಣಗಳಿಂದಾಗಿ ತಮಗೆ ತಂಡದಿಂದ ರಿಲೀಸ್ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದು, ಈ ಹಿನ್ನೆಲೆ ಅವರನ್ನು ಹೊರಗುಳಿಸಲಾಗಿದೆ.
ಈಗಾಗಲೇ ಇಂಗ್ಲೆಂಡ್​ ವಿರುದ್ಧದ ಟೀಂ ಇಂಡಿಯಾ ಈಗಾಗಲೇ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ.
ಜಸ್ಪ್ರೀತ್ ಬುಮ್ರಾ ಬದಲಿಗೆ ಯಾವುದೇ ಬದಲಿ ಆಟಗಾರನಿಗೆ ಟೀಂ ಇಂಡಿಯಾ ಬುಲಾವ್​ ನೀಡಿಲ್ಲ. ಜತೆಗೆ ವೇಗದ ಬೌಲರ್​ಗೆ ತಂಡದಿಂದ ರಿಲೀಸ್ ಮಾಡಿರುವುದಾಗಿ ಬಿಸಿಸಿಐ ಟ್ವೀಟರ್​ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!