ಪಾಕ್ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಗೆ ಬಂಧನ ಪೂರ್ವ ಜಾಮೀನು ನೀಡಿದ ಪೇಶಾವರ ಹೈಕೋರ್ಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ವಿರುದ್ಧ ದಾಖಲಾಗಿರುವ 14 ಪ್ರಕರಣಗಳಲ್ಲಿ ಪಾಕಿಸ್ತಾನದ ನ್ಯಾಯಾಲಯ ಮೂರು ವಾರಗಳ ಕಾಲ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ತೆಹ್ರಿಕ್‌-ಎ-ಇನ್ಸಾಫ್‌ (ಪಿಟಿಐ) ಪಕ್ಷವು ಮೇ 25ರಂದು ಇಸ್ಲಾಮಾಬಾದ್‌ನಲ್ಲಿ ಆಯೋಜಿಸಿದ್ದ ಪಥಸಂಚಲನ ಮೆರವಣಿಗೆಯಲ್ಲಿ ಇಮ್ರಾನ್‌ ಖಾನ್‌ ಅವರ ಬೆಂಬಲಿಗರು ಸಾರ್ವಜನಿಕ ಆಸ್ತಿಗಳನ್ನು ದಹಿಸಿ, ವಿಧ್ವಂಸಕ ಕೃತ್ಯಗಳನ್ನೆಸಗಿದ್ದರು.
ಮಾಧ್ಯಮ ವರದಿಗಳ ಪ್ರಕಾರ 50,000 ರೂಪಾಯಿಗಳ ಶ್ಯೂರಿಟಿಯ ಜೊತೆಗೆ ಮಾಜಿ ಪ್ರಧಾನಿ ಖಾನ್‌ಗೆ ಪೇಶಾವರ ಹೈಕೋರ್ಟ್ ಜಾಮೀನು ನೀಡಿದೆ ಎಂದು ಹೇಳಲಾಗಿದೆ. ಬಂಧನದ ಭಯದಿಂದ ಖಾನ್​ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಪಿಎಚ್‌ಸಿ ಮುಖ್ಯ ನ್ಯಾಯಮೂರ್ತಿ ಖೈಸರ್ ರಶೀದ್ ಇವರ ಮನವಿ ಸ್ವೀಕರಿಸಿದ್ದರು. ಜೊತೆಗೆ ಖಾನ್ ಖುದ್ದು ವಿಚಾರಣೆಗೆ ಹಾಜರಾಗಿದ್ದರು.
ಜೂನ್ 25 ರ ವರೆಗೆ ಜಾಮೀನು ನೀಡಿದ್ದು, ಜೂನ್ 25 ಕ್ಕೂ ಮೊದಲು ಇಸ್ಲಾಮಾಬಾದ್ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗುವಂತೆ ಖಾನ್ ಅವರಿಗೆ ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!