ದ್ವಾದಶ ಮಾಧವ ದೇಗುಲ ಮತ್ತು ಪರಿಕ್ರಮ ಮಾರ್ಗಕ್ಕೂ ನ್ಯಾಯಾಲಯದಲ್ಲಿ ಅರ್ಜಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರಯಾಗ್‌ ರಾಜ್‌ ನಲ್ಲಿರುವ ದ್ವಾದಶ ಮಾಧವ ದೇವಾಲಯಗಳ ಜೀರ್ಣೋದ್ಧಾರ ಮತ್ತು ಅಲ್ಲಿಗರ ತಲುಪುವ ಪರಿಕ್ರಮ ಮಾರ್ಗವನ್ನು ನಿರ್ಮಿಸುವಂತೆ ಅಲಹಾಬಾದ್‌ ಹೈಕೋರ್ಟ್‌ ಗೆ ಪಿಐಎಲ್‌ ಅರ್ಜಿ ಸಲ್ಲಿಕೆಯಾಗಿದ್ದು ಪ್ರಾಥಮಿಕ ವಿಚಾರಣೆಯ ನಂತರ ಪರಿಷ್ಖೃತ ಅರ್ಜಿ ಸಲ್ಲಿಸುವಂತೆ ಕೋರ್ಟ್‌ ಹೇಳಿದೆ.

ಟಿಕರ್ಮಾಫಿ ಆಶ್ರಮದ ಹರಿ ಚೈತನ್ಯ ಬ್ರಹ್ಮಚಾರಿ ಮತ್ತು ವಕೀಲ ವಿಜಯ್ ಚಂದ್ರ ಶ್ರೀವಾಸ್ತವ ಅವರು ಸಲ್ಲಿಸಿದ್ದ ಸಾರ್ವಜನಿಕೆ ಹಿತಾಸಕ್ತಿ ಮೊಕದ್ದೆಯನ್ನು ವಿಚಾರಿಸಿದ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಜೆಜೆ ಮುನೀರ್ ಅವರ ವಿಭಾಗೀಯ ಪೀಠವು ಪರಿಷ್ಕೃತ ಅರ್ಜಿ ಸಲ್ಲಿಸುವಂತೆ ಹೇಳಿದೆ.
ಮನವಿಯಲ್ಲಿ “ತೀರ್ಥರಾಜ್ ಪ್ರಯಾಗದಲ್ಲಿರುವ ಹನ್ನೆರಡು ಮಾಧವ ದೇವಾಲಯಗಳು ಅಪಾರ ಮಹತ್ವವನ್ನು ಹೊಂದಿದ್ದು, ಸಂತರು, ಋಷಿಮುನಿಗಳು ಮತ್ತು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಈ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸುವುದು ಮತ್ತು ಸುಲಭವಾಗಿ ಸಾಗಲು ಅನುಕೂಲವಾಗುವಂತ ಪರಿಕ್ರಮ ಮಾರ್ಗವನ್ನು ನಿರ್ಮಿಸಬೇಕು” ಎನ್ನಲಾಗಿದೆ.

ಮನವಿಯ ಪ್ರಕಾರ ಮಾಧವ ಪ್ರಯಾಗ್‌ ರಾಜ್‌ನ ಪ್ರಧಾನ ದೇವತೆ. 18 ಪುರಾಣಗಳಲ್ಲಿ ಒಂದಾದ ಬ್ರಹ್ಮ ವೈವರ್ತ್ಯ ಪುರಾಣದಲ್ಲಿ ದ್ವಾದಶ ಮಾಧವರ ಬಗ್ಗೆ ಉಲ್ಲೇಖಿಸಲಾಗಿದೆ. ಬ್ರಹ್ಮಾಂಡದ ಸೃಷ್ಟಿಯ ನಂತರ, ಪರಮಪಿತ ಬ್ರಹ್ಮನು 6 ಅಂತರ್ವೇದಿ ಮಾಧವ್ (ವೇಣಿ, ವತ್, ಅನಂತ, ಅಸಿ, ಮನೋಹರ್, ಬಿಂದು ಮಾಧವ), 4 ಮಧ್ಯವೇದಿ ಮಾಧವ (ಆದಿ, ಚಕ್ರ, ಗದಾ, ಪದಮ್ ಮಾಧವಸ್) ಮತ್ತು 2 ಬಹಿರ್ವೇದಿ ಮಾಧವ್ (ಸಂಕಟ್ ಹರನ್, ಸಂಖ್ ಮಾಧವಸ್) ಹೀಗೆ ಹನ್ನೆರಡು ಮಾಧವರನ್ನು ಸ್ಥಾಪಿಸಿದನು ಎಂದು ನಂಬಲಾಗಿದೆ ಮತ್ತು ಈ ದೇಗುಲಗಳು ಪ್ರಯಾಗ್‌ ರಾಜ್‌ನ ವಿವಿಧ ಸ್ಥಳಗಳಲ್ಲಿದೆ. ಪುರಾತನ ಕಾಲದಿಂದಲೂ ಸಂತರು ಮತ್ತು ಋಷಿಗಳು ದ್ವಾದಶ ಮಾಧವ ದೇವಾಲಯಗಳ ಪರಿಕ್ರಮವನ್ನು ಮಾಡುತ್ತಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಪ್ರಸ್ತುತ ಪರಿಕ್ರಮ ಮಾರ್ಗದಲ್ಲಿ ಅನೇಕ ಅಡೆತಡೆಗಳಿದ್ದು ಪರಿಕ್ರಮಕ್ಕೆ ಸರಿಯಾದ ಮಾರ್ಗವಿಲ್ಲ. ಭಕ್ತರು ದರ್ಶನ ಪಡೆಯಲು ಕಷ್ಟವಾಗುತ್ತಿದ್ದು ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ.

ಆದ್ದರಿಂದ, ದ್ವಾದಶ ಮಾಧವ ದೇವಸ್ಥಾನಗಳನ್ನು ತಲುಪುವ ಮಾರ್ಗದ ಮೇಲಿನ ಅಕ್ರಮ ಒತ್ತುವರಿಯನ್ನು ತೆಗೆದುಹಾಕಬೇಕು, ಯಾತ್ರಿಕರ ಮಾರ್ಗವನ್ನು ನಿರ್ಮಿಸಬೇಕು ಮತ್ತು ದ್ವಾದಶ ಮಾಧವರ ಭವ್ಯ ದೇವಾಲಯಗಳನ್ನು ಜಿರ್ಣೋದ್ಧಾರಗೊಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಈ ಸಂಬಂಧ ಅಫಿಡವಿಟ್‌ ಬದಲಾಗಿ ಅರ್ಜಿಯಲ್ಲಿಯೇ ದೇವಾಲಯಗಳ ವಿವರಗಳನ್ನು ಮತ್ತು ಅವುಗಳ ಮಹತ್ವವನ್ನು ಸೇರಿಸಿ ಪರಿಷ್ಕೃತ ಅರ್ಜಿಯನ್ನು ಸಲ್ಲಿಸುವಂತೆ ಪೀಠವು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!