ಶ್ರದ್ಧಾ ಮರ್ಡರ್ ಕೇಸ್‌ನ್ನು ಸಿಬಿಐಗೆ ವರ್ಗಾಯಿಸುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.

ವಕೀಲ ಜೋಶಿನಿ ತುಲಿ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಮನವಿ ಮಾಡಲಾಗಿದೆ. ಶ್ರದ್ಧಾ ಹತ್ಯೆಯಾಗಿ ಆರು ತಿಂಗಳು ಕಳೆದಿದೆ. ಶ್ರದ್ಧಾ ದೇಹದ ತುಂಡುಗಳು ಹಲವು ಭಾಗಗಳಲ್ಲಿ ದೊರಕಿದೆ. ಸಾಕ್ಷಿಗಳನ್ನು ಹುಡುಕಲು ದೆಹಲಿ ಪೊಲೀಸರ ಬಳಿ ಆಡಳಿತಾತ್ಮಕ ಅಥವಾ ಸಿಬ್ಬಂದಿ ಕೊರತೆ ಇದೆ. ಸಾಕಷ್ಟು ವೈಜ್ಞಾನಿಕ ಹಾಗೂ ತಾಂತ್ರಿಕ ಸಲಕರಣೆಗಳ ಕೊರತೆ ಇದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ದೆಹಲಿ ಪೊಲೀಸರು ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಈ ಪ್ರಕರಣ ಸೈಬರ್ ಕ್ರೈಂ ವ್ಯಾಪ್ತಿಗೂ ಬರಲಿದೆ. ಡೇಟಿಂಗ್ ಆಪ್‌ಗಳ ಸುರಕ್ಷತೆ ಬಗ್ಗೆಯೂ ಆಲೋಚಿಸಬೇಕಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲು ಈ ಕೇಸ್‌ನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಮನವಿ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!