spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೆಟ್ರೋಲ್, ಡೀಸೆಲ್ ಬೆಲೆ: ರಾಜ್ಯಗಳಿಗೆ ಗರಿಷ್ಠ ಲಾಭ; ನಿಂದೆಗೆ ಗುರಿಯಾದ್ದು ಮೋದಿ!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸುದ್ದಿ ವಿಶ್ಲೇಷಣೆ

ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ವರ್ಗ ಸತ್ಯ ಅರಿತಿದ್ದೂ, ದುರುದ್ದೇಶಪೂರ್ವಕವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ದೂಷಿಸಿದರೆ, ಸಾಮಾಜಿಕ ಮಾಧ್ಯಮ ಬಳಕೆದಾರರಾಗಿ ಅವುಗಳಲ್ಲಿ ಬಂದದ್ದನ್ನೇ ಪರಮಸತ್ಯ ಎಂದು ಹಿಂದೆ ಮುಂದೆ ನೋಡದೆ ನಂಬಿರುವ ಇನ್ನೊಂದು ‘ಎಜುಕೇಟೆಡ್’ ಯುವವರ್ಗ ಕೂಡಾ ಮೋದಿಯವರನ್ನು ನಿಂದಿಸಿತು. ಆದರೆ ತೈಲ ಬೆಲೆ ಹೆಚ್ಚಳದಿಂದ ಗರಿಷ್ಠ ಲಾಭ ಪಡೆದಿರುವುದು ರಾಜ್ಯಗಳೇ. ಮತ್ತು ಕೋವಿಡ್ ಸಂಕಟದ ಸಮಯ ರಾಜ್ಯಗಳ ಆದಾಯ ಮೂಲವನ್ನು ಕಾಯ್ದುಕೊಳ್ಳಲು ನೆರವಾಗಿದ್ದು ಕೂಡಾ ಈ ತೈಲ ಬೆಲೆ ಏರಿಕೆಯೇ .ಆದ ಕಾರಣದಿಂದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಮೋದಿಯವರನ್ನು ಬಾಯಿಗೆ ಬಂದಂತೆ ನಿಂದಿಸಿದ ಕಾಂಗ್ರೆಸ್‌ನ ಆಡಳಿತ ಇರುವ ರಾಜ್ಯಗಳು ಸೇರಿದಂತೆ ಯಾವುದೇ ರಾಜ್ಯ ಸರಕಾರಗಳು ತೈಲ ಬೆಲೆಯ ಮೇಲಿನ ತೆರಿಗೆ ಇಳಿಸಲಾಗಲಿ ಅಥವಾ ತೈಲ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕಾಗಲಿ ಬೆಂಬಲಿಸಿಲ್ಲ .ಬದಲಿಗೆ ಶುಕ್ರವಾರ ನಡೆದ ಜಿಎಸ್‌ಟಿ ಸಭೆಯಲ್ಲಿ ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಪ್ರಸ್ತಾವವನ್ನು ತೀವ್ರವಾಗಿ ವಿರೋಸಿದವು!

ಆದರೆ ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲೂ ಈ ಸತ್ಯವನ್ನು ಅರಿಯದೆ ಎಜುಕೇಟೆಡ್ ವಲಯ ಮೋದಿಯವರನ್ನು ಮತ್ತು ಕೇಂದ್ರ ಸರಕಾರವನ್ನು ಬೇಕಾಬಿಟ್ಟಿ ನಿಂದಿಸಿದ್ದನ್ನು ನೋಡುವಾಗ ಎಷ್ಟು ಆಧುನಿಕತೆ ಬಂದರೇನು?ಎಷ್ಟು ಶಿಕ್ಷಣ ಪಡೆದರೇನು?ಅಸತ್ಯವನ್ನೇ ಸತ್ಯ ಎಂಬಂತೆ ಜೋರಾಗಿ ಮತ್ತು ನಿರಂತರವಾಗಿ ಹೇಳಿದರೆ ಜನತೆ ನಂಬುತ್ತದೆ ಎಂಬುದು ಇಂದಿಗೂ ಸತ್ಯವೇ ಆಗಿದೆ.

ರಾಹುಲ್ ಗಾಂಧಿಯಿಂದ ಹಿಡಿದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರಿಂದ ಹಿಡಿದು ಮರಿ ನಾಯಕರವರೆಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಮೋದಿಯವರನ್ನು ಹೇಗೆ ನಿಂದಿಸಿದ್ದಾರೆ, ಅಪಹಾಸ್ಯಗೈದಿದ್ದಾರೆ ಎಂಬುದನ್ನು ನೋಡಿದ್ದೇವೆ.ಆದರೆ ಪಂಜಾಬ್ , ರಾಜಸ್ತಾನ (ಕಾಂಗ್ರೆಸ್ ಆಡಳಿತದ ರಾಜಸ್ತಾನ ಮತ್ತು ಬಿಜು ಜನತಾದಳ ಆಡಳಿತದ ಒಡಿಶಾದಲ್ಲಿ ಡೀಸೆಲ್ ಬೆಲೆಯೂ 100ರ ಗಡಿ ದಾಟಿದೆ!) ಛತ್ತೀಸ್‌ಗಢದ ಕಾಂಗ್ರೆಸ್ ಸರಕಾರವಾಗಲಿ, ಮಹಾರಾಷ್ಟ್ರದ ಕಾಂಗ್ರೆಸ್ ಬೆಂಬಲಿತ ಸರಕಾರವಾಗಲಿ, ದಿಲ್ಲಿಯ ಆಮ್ ಆದ್ಮಿ ಸರಕಾರವಾಗಲಿ, ಪೆಟ್ರೋಲ್ ಬೆಲೆ ಏರಿಕೆಗಾಗಿ ಪ್ರಧಾನಿ ಮೋದಿಯವರನ್ನು ಚುಚ್ಚಿ ಹೇಳಿಕೆ ನೀಡಿದ ಶಿವಸೇನಾ ನೇತೃತ್ವದ ಸರಕಾರವಾಗಲಿ,ಮಾತು ಮಾತಿಗೂ ಬಡವರ ಬಗ್ಗೆ ಇನ್ನಿಲ್ಲದಂತೆ ಮಾತನಾಡುವ ಕಮ್ಯುನಿಸ್ಟರ ಆಡಳಿತದಲ್ಲಿರುವ ಕೇರಳದಲ್ಲಿನ ಪಿಣರಾಯಿ ಸರಕಾರವಾಗಲಿ ಬಡಜನರಿಗೆ ನೆರವಾಗುವ ನಿಟ್ಟಿನಲ್ಲಿ ನೀವೇಕೆ ಪೆಟ್ರೋಲ್ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ಒಪ್ಪುತ್ತಿಲ್ಲ ಎಂಬುದನ್ನು ಮಾಧ್ಯಮಗಳಾಗಲಿ, ಪತ್ರಕರ್ತರಾಗಲಿ ಕೇಳಿಲ್ಲ !ಬದಲಿಗೆ ಜಿಎಸ್‌ಟಿ ವ್ಯಾಪ್ತಿಗೆ ತಂದದ್ದೇ ಆದರೆ ಪೆಟ್ರೋಲ್ , ಡೀಸೆಲ್ ಬೆಲೆ 55ರೂ.ಗಳಿಗೆ ಇಳಿಸಲು ಸಾಧ್ಯ ಎಂದು ವಿಶ್ಲೇಷಿಸಲಾಗುತ್ತಿದೆ.ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯಗಳು ಒಪ್ಪಿಗೆ ನೀಡಿದ್ದೇ ಆದಲ್ಲಿ ತನ್ನ ಅಭ್ಯಂತರವೇನೂ ಇಲ್ಲ ಎಂಬುದಾಗಿ ಕೇಂದ್ರ ಸರಕಾರ ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದರೂ ರಾಹುಲ್ ಗಾಂಧಿ ಅಥವಾ ಇತರ ವಿಪಕ್ಷ ನಾಯಕರು ತಮ್ಮ ಪಕ್ಷ ಆಡಳಿತ ನಡೆಸುವ ರಾಜ್ಯ ಸರಕಾರಗಳಿಗೆ ಈ ಬಗ್ಗೆ ಏಕೆ ಸೂಚನೆ ನೀಡಿಲ್ಲ?

2017 ರ ಜುಲೈಯಲ್ಲಿ ಜಿಎಸ್‌ಟಿ ಜಾರಿಯಾದಾಗ , ದೇಶದ ಎಲ್ಲ ರಾಜ್ಯ ಸರಕಾರಗಳ ಪ್ರತಿನಿಧಿಗಳನ್ನು ಒಳಗೊಂಡ ಜಿಎಸ್‌ಟಿ ಸಮಿತಿಯು ಪೆಟ್ರೋಲಿಯಂ ಉತ್ಪನ್ನ (ಕಚ್ಚಾ ತೈಲ , ಪೆಟ್ರೋಲ್, ಡೀಸೆಲ್, ಅನಿಲ, ವಿಮಾನ ಇಂಧನಗಳನ್ನು ಜಿಎಸ್‌ಟಿಯಿಂದ ಹೊರಗಿಟ್ಟಿತ್ತು.ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರಮುಖ ಆದಾಯ ಮೂಲ ಎಂಬ ನೆಲೆಯಲ್ಲೇ ಇಂತಹ ನಿಲುವು ಕೈಗೊಳ್ಳಲಾಗಿತ್ತು.ಪಂಪ್‌ಗಳಲ್ಲಿನ ತೈಲ ಮಾರಾಟ ಮೇಲಿನ ಶೇ.28ರ ತೆರಿಗೆ ಕೂಡಾ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿ ಹೋಗುತ್ತಿದೆ.ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಮಾರಾಟ ತೆರಿಗೆ, ವ್ಯಾಟ್ಸ್, ಜಿಎಸ್‌ಟಿ ಇತ್ಯಾದಿಗಳಿಂದ ಆಂಧ್ರಕ್ಕೆ 11,013ಕೋ.ರೂ.(ಜಿಎಸ್‌ಟಿಯಿಂದ 111.78ಕೋ.ರೂ.), ದಿಲ್ಲಿ ಸರಕಾರಕ್ಕೆ 2652ಕೋ.ರೂ.(36.73ಕೋ.ರೂ.), ಮಹಾರಾಷ್ಟ್ರ ಸರಕಾರ (ದೇಶದಲ್ಲೇ ಮಹಾರಾಷ್ಟ್ರ ಸರಕಾರ ಅತಿಹೆಚ್ಚಿನ ಆದಾಯ ಪಡೆಯುತ್ತಿದೆ .ಮಹಾರಾಷ್ಟ್ರದಿಂದ ಹೆಚ್ಚು ದೊಡ್ಡದಾದ ಮತ್ತು ಜನಸಂಖ್ಯೆ ಇರುವ ಉತ್ತರಪ್ರದೇಶಕ್ಕೆ 21955ಕೋ.ರೂ. ಮತ್ತು 602ಕೋ.ರೂ.)ಕ್ಕೆ 25,430 ಕೋ.ರೂ.(932ಕೋ.ರೂ.), ಕೇರಳ ಸರಕಾರಕ್ಕೆ 6923ಕೋ.ರೂ.ಮತ್ತು 136ಕೋ.ರೂ., ಪಂಜಾಬ್ ಸರಕಾರಕ್ಕೆ 6291ಕೋ.ರೂ. ಮತ್ತು 43ಕೋ.ರೂ., ತಮಿಳ್ನಾಡು ಸರಕಾರಕ್ಕೆ 17,063ಕೋ.ರೂ. ಮತ್ತು 439ಕೋ.ರೂ.) ಆದಾಯ ಬರುತ್ತಿದೆ. ಕರ್ನಾಟಕಕ್ಕೆ 15,476 ಕೋ.ರೂ. ಮತ್ತು 260 ಕೋ.ರೂ.ಗಳ ಆದಾಯ ಬರುತ್ತಿದೆ.

ಕಟು ವಾಸ್ತವ ಇದಾಗಿದ್ದರೂ ಕೋವಿಡ್ ಸಂಕಟ ನಿಭಾಯಿಸುವಲ್ಲಿ ದೇಶದ 138 ಕೋಟಿ ಜನರಿಗೆ ಉಚಿತ ಲಸಿಕೆ ನೀಡಲು ಮುಂದಾಗಿರುವ, ನವೆಂಬರ್ ವರೆಗೆ ದೇಶದ 80 ಕೋಟಿ ಬಡಜನರಿಗೆ ಉಚಿತ ಆಹಾರಧಾನ್ಯ ಒದಗಿಸುವ, ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಲು ಕಾಳಜಿ ವಹಿಸಿರುವ, ಕೋವಿಡ್ ನಡುವೆಯೂ ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸಿರುವ ಮೋದಿಯವರಿಗೆ ನಿಂದೆ ಮಾತ್ರ ಸಿಕ್ಕಿದೆ!

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss