Saturday, August 13, 2022

Latest Posts

ಪೆಟ್ರೋಲ್-ಡಿಸೇಲ್ ಬೆಲೆ ಗಗನಕ್ಕೆ: ಇಂದಿನಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಹಾಗೂ ಸರ್ಕಾರದ ಗುಜರಿ ನೀತಿ ಖಂಡಿಸಿ ಇಂದಿನಿಂದ ಲಾರಿ ಮುಷ್ಕರ ಆರಂಭವಾಗಲಿದೆ.
ರಾಷ್ಟ್ರವ್ಯಾಪಿ ಲಾರಿ ಮುಷ್ಕರ ಇದಾಗಿದ್ದು, ಲಾರಿಗಳಿಗೆ ಡಿಸೇಲ್ ಹಾಕಿಸಲು ಕಷ್ಟವಾಗುತ್ತಿದೆ. ಇದನ್ನು ನಿಭಾಯಿಸಲು ಲಾರಿ ಮಾಲೀಕರಿಗೆ ಸಾಧ್ಯವಾಗುತ್ತಿಲ್ಲ ಎಂದು ಫೆಡರೇಶನ್ ಆಫ್ ಕರ್ನಾಟಕ ಲಾರಿ ಓನರ‍್ಸ್ ಅಸೋಸಿಯೇಶನ್ ಅಧ್ಯಕ್ಷ ಚೆನ್ನಾರೆಡ್ಡಿ ಹೇಳಿದ್ದಾರೆ.
ಹೀಗಾಗಿ ಡಿಸೇಲ್ ದರ ಇಳಿಕೆ ಒತ್ತಾಯಿಸಲಾಗಿದೆ. ಹದಿನೈದು ವರ್ಷ ಹಳೆಯದಾದ ವಾಹನಗಳಿಗೆ ಗುಜರಿ ನೀತಿಯನ್ನು ಕೇಂದ್ರ ಜಾರಿಗೊಳಿಸಿದ್ದು, ಈ ನಿಯಮದಿಂದಾಗಿ ಸಾವಿರಾರು ಲಾರಿಗಳು ಗುಜರಿ ಸೇರುತ್ತವೆ.
ಇದನ್ನು ಖಂಡಿಸಿ ಲಾರಿ ನೌಕರರು ಮುಷ್ಕರ ನಡೆಸಲಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss