Sunday, August 14, 2022

Latest Posts

ಎಲ್ಲೆಡೆ ಸೆಂಚುರಿ ಬಾರಿಸಿದ ಪೆಟ್ರೋಲ್ ಬೆಲೆ: ಸಿಲಿಕಾನ್ ಸಿಟಿಯಲ್ಲಿ ಎಷ್ಟಿದೆ ರೇಟ್?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ದೇಶದಲ್ಲಿಯೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಲೇ ಇದೆ. ಲೀಟರ್ ಪೆಟ್ರೋಲ್ ದರದಲ್ಲಿ 31-39 ಪೈಸೆ ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 9-15 ಪೈಸೆ ಹೆಚ್ಚಳವಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ರೇಟ್?

ರಾಜಸ್ಥಾನದಲ್ಲಿ ಲೀಟರ್ ಪೆಟ್ರೋಲ್ ದರ 111.87 ರೂ. ಗೆ ತಲುಪಿದ್ದು, ಮುಂಬೈ ನಲ್ಲಿ 106.59 ರೂ. , ಕೊಲ್ಕತ್ತಾದಲ್ಲಿ 100.62 ರೂ., ದೆಹಲಿಯಲ್ಲಿ 100.56 ರೂ., ಬೆಂಗಳೂರಿನಲ್ಲಿ ಲೀಟರ್ ಗೆ 103.95 ರೂ. ಗೆ ತಲುಪಿದೆ.

ಲೀಟರ್ ಡೀಸೆಲ್ ದರ ರಾಜಸ್ಥಾನದಲ್ಲಿ 102.87 ರೂ. ಆಗಿದ್ದು, ಮುಂಬೈ ನಲ್ಲಿ 97.18 ರೂ., ಕೊಲ್ಕತ್ತಾದಲ್ಲಿ 92.65 ರೂ., ದೆಹಲಿಯಲ್ಲಿ 89.62 ರೂ., ಬೆಂಗಳೂರಿನಲ್ಲಿ 94.99 ರೂ.ಗೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss