Wednesday, November 30, 2022

Latest Posts

ಯಲ್ಲಾಪುರದ ಆರ್ತಿ ಘಟ್ಟದಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ : ತಪ್ಪಿದ ಅನಾಹುತ

ಹೊಸದಿಗಂತ ವರದಿ ಯಲ್ಲಾಪುರ :

ತಾಲೂಕಿನ ಆರ್ತಿ ಘಟ್ಟ ದಲ್ಲಿ ಪೆಟ್ರೋಲ್ ತುಂಬಿದ ಟ್ಯಾಂಕರ್ ಪಲ್ಟಿ ಯಾಗಿದ್ದು ಯಾವದೇ ಪ್ರಾಣಾಪಾಯವಾಗಿಲ್ಲ. ಸ್ಥಳೀಯರು, ಪೊಲೀಸರ ಮುಂಜಾಗ್ರತೆಯಿಂದ ಭಾರಿ ಅವಘಡ ತಪ್ಪಿದೆ.

ಮಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಪೆಟ್ರೋಲ್ ತುಂಬಿದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಉರುಳಿ ಬಿದ್ದಿದೆ.ತಕ್ಷಣ ಎಚ್ಚೆತ್ತ ಸ್ಥಳೀಯ ನಾಗರಿಕರು ಯಲ್ಲಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಅಗ್ನಿಶಾಮಕ ದಳ, ಕ್ರೇನ್ ನಿರ್ವಾಹಕರ ಸಹಕಾರದೊಂದಿಗೆ ಪೆಟ್ರೋಲ್ ಸೋರಿಕೆ ಸ್ಥಗಿತಗೊಳಿಸಿ ಸಂಭವನೀಯ ಅವಘಡ ತಪ್ಪಿಸಿದ್ದಾರೆ .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!