PFI ಗೆ ಹಣಕಾಸು ನೆರವು ನೀಡುತ್ತಿದ್ದ ವ್ಯಕ್ತಿ ಸಿಂಗಾಪುರದಿಂದ ಗಡಿಪಾರು: ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಬಂಧಿಸಿದ NIA

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
PFI ಗೆ ಸಿಂಗಾಪುರದಲ್ಲಿ ನಿಧಿಸಂಗ್ರಹ ಮಾಡುತ್ತಿದ್ದ ಸಿಂಗಾಪುರ ಮೂಲದ ಭಾರತೀಯ ಪ್ರಜೆ ಸಾಹಿಲ್ ಹಮ್ಮದ್ ಎಂಬಾತನನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಆತ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಎನ್‌ಐ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಬಂಧಿಸಿದ್ದಾರೆ.
ಪಿಎಫ್‌ ಐ ಸಂಘಟನೆಯ ಅಕ್ರಮ ಚಟುವಟಿಕೆಗಳ ವಿರುದ್ಧ ಎನ್‌ಐಎ ಕಠಿಣ ಕ್ರಮ ಕೈಗೊಂಡಿದೆ. ಗುರುವಾರ 15 ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡಗಳು PFI ಸಂಸ್ಥೆಯ ವಿವಿಧ ಘಟಕಗಳ ಮೇಲೆ ದಾಳಿ ನಡೆಸಿ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸಿದ ಆರೋಪದ ಮೇಲೆ 106 ಕಾರ್ಯಕರ್ತರ ಬಂಧಿಸಿದ್ದವು. ಇದೇ ಸಮಯದಲ್ಲಿ ಈ ಬೆಳವಣಿಗೆಯು ನಡೆದಿದೆ.
ಮೂಲಗಳ ಪ್ರಕಾರ, ಸಾಹಿಲ್ ಸಿಂಗಾಪುರ ಮೂಲದ ಡೈನಾ-ಮ್ಯಾಕ್ ಇಂಜಿನಿಯರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಗುಣಮಟ್ಟದ ವಿಶ್ಲೇಷಕ ಮತ್ತು ಗುಣಮಟ್ಟ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಾನೆ. ಆತ ಆ ದೇಶದಿಂದ 2016 ರಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಗಾಗಿ ಹಣವನ್ನು ಸಂಗ್ರಹಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.
ಅವರು ಸಿಂಗಾಪುರದಿಂದ PFI ಗೆ ಹಲವಾರು ಸಾಗರೋತ್ತರ ಬ್ಯಾಂಕ್ ವರ್ಗಾವಣೆಗಳನ್ನು ಮಾಡಿದ್ದ. ಈ ವರ್ಗಾವಣೆಗಳಿಂದಾಗಿಯೇ ಆತ ತನಿಖಾ ಸಂಸ್ಥೆಗಳ ಸ್ಕ್ಯಾನರ್ ಅಡಿಯಲ್ಲಿ ಬಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಸಾಹಿಲ್ 2009 ರಲ್ಲಿ PFI ಯೊಂದಿಗೆ ಸಂಪರ್ಕಕ್ಕೆ ಬಂದಿದ್ದ ಮತ್ತು ಪಿಎಫ್‌ಐ ಕಟ್ಟಾ ಅಭಿಮಾನಿಯಾಗಿದ್ದ.
ಆತ ಸಿಂಗಾಪುರದಿಂದ ಆಗಮಿಸುತ್ತಿದ್ದಂತೆ ವಿಮಾನ ನಿಲ್ದಾಣದಲ್ಲೇ ಆತನನ್ನು ಎನ್‌ಐಎ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತ ಸಿಂಗಾಪುರದಲ್ಲಿ ಪಿಎಫ್‌ಐನ ನಿಧಿಸಂಗ್ರಹ ಮತ್ತು ಇತರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!