ಚಿತ್ರದುರ್ಗದಲ್ಲಿ ಓರ್ವ ಪಿ.ಎಫ್.ಐ. ಮುಖಂಡನ ಬಂಧನ

ಹೊಸದಿಗಂತ ವರದಿ ಚಿತ್ರದುರ್ಗ:

ರಾಜ್ಯದ ವಿವಿಧೆಡೆಗಳಲ್ಲಿ ಪಿ.ಎಫ್.ಐ. ಮುಖಂಡರನ್ನು ಬಂಧಿಸಲಾಗಿದ್ದು, ಚಿತ್ರದುರ್ಗ ದಲ್ಲೂ ಒಬ್ಬರನ್ನು ಬಂಧಿಸಲಾಗಿದೆ.
ನಗರದ ಚಿಕ್ಕಪೇಟೆ ನಿವಾಸಿ ಅರ್ಫಾನ್ ಆಲಿ ಬಂಧಿತ ವ್ಯಕ್ತಿ. ಈತ ರೌಡಿಶೀಟರ್ ಆಗಿದ್ದು, ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ. ವಿವಿಧೆಡೆಗಳಲ್ಲಿ ಪಿ.ಎಫ್.ಐ. ಮೂಖಂಡರ ಬಂಧನದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಲು ಪಿ.ಎಫ್.ಐ.ಕಾರ್ಯಕರ್ತರನ್ನು ಪ್ರಚೋದಿಸುತ್ತಿದ್ದ ಎನ್ನಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಂಗಳವಾರ ಬೆಳಗಿನಜಾವ 4 ಗಂಟೆಗೆ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!