ಉದಯಪುರ, ಅಮರಾವತಿ ಹಂತಕರಿಗೆ ಪಿಎಫ್‌ಐ, ಎಸ್‌ಡಿಪಿಐ ನಂಟು?: ತನಿಖೆ ಹೊರಹಾಕಿರುವ ಅಂಶವೇನು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಉದಯ ಪುರ ಹಾಗೂ ಅಮರಾವತಿಯಲ್ಲಿ ನಡೆದ ಹಿಂದು ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದೊಂದಿಗೆ ಸಂಪರ್ಕವಿರುವುದನ್ನು ತನಿಖೆಗಳು ಹೊರಹಾಕಿವೆ. ಅಲ್ಲದೇ ಅಮರಾವತಿಯ ಔಷಧಿಕಾರ ಉಮೇಶ್ ಕೋಲ್ಹೆ ಮತ್ತು ಉದಯಪುರ ಟೈಲರ್ ಕನ್ಹಯಾ ಲಾಲ್ ಇವರಿಬ್ಬರಿಗೂ ಕೊಲೆಯ ಮೊದಲು ಇಸ್ಲಾಮಿಸ್ಟ್‌ ಬೆದರಿಕೆ ಕರೆಗಳು ಬಂದಿದ್ದರೂ ಕೂಡ ಪೋಲೀಸರು ಅದನ್ನು ಕಡೆಗಣಿಸಿದ್ದರು ಎಂದು ಎನ್‌ಐಎ ತನಿಖೆ ಹೊರಹಾಕಿದೆ ಎಂದು ಮೂಲಗಳು ವರದಿ ಮಾಡಿವೆ.

ಕನ್ಹಯ್ಯಾ ಲಾಲ್‌ ಹತ್ಯೆಯ ಸಂಬಂಧ ಫರ್ಹಾದ್ ಮೊಹಮ್ಮದ್ ಶೇಖ್ ಅಕಾ ಬಬ್ಲಾ ಏಳನೇ ಆರೋಪಿಯನ್ನು ಎನ್‌ಐಎ ಬಂಧಿಸಿದೆ. ಜೂನ್ 20 ರಂದು PFI ನಿಂದ ನೂಪುರ್ ಶರ್ಮಾ ವಿರುದ್ಧದ ರ್ಯಾಲಿ ನಂತರ ಉದಯಪುರ ಸಂಚು ರೂಪಿಸಲಾಗಿದೆ ಎಂಬ ಅಂಶ ಈ ವೇಳೆ ಹೊರಬಿದ್ದಿದೆ. ಈ ರ್ಯಾಲಿಯ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಎನ್‌ಐಎ ಹೊರಹಾಕಿಲ್ಲ ಆದರೆ ಪ್ರಮುಖ ಆರೋಪಿ ರಿಯಾಜ್ ಅತ್ತಾರ್ ಎಸ್‌ಡಿಪಿಐಗೆ ಸೇರಿದ್ದ ಮತ್ತು ಸಕ್ರಿಯ ಸದಸ್ಯನಾಗಿದ್ದ ಎಂಬುದು ಈಗ ದೃಢಪಟ್ಟಿದೆ. ಇನ್ನೊಬ್ಬ ಆರೋಪಿ ಬಾಬ್ಲಾ ತನ್ನ ವಿಚಾರಣೆಯಲ್ಲಿ ತನ್ನ ಪಿಎಫ್‌ಐ-ಎಸ್‌ಡಿಪಿಐ ನಂಟುಗಳನ್ನು ಸಹ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಇನ್ನು ಇವರು ಅಂತರಾಷ್ಟ್ರೀಯ ಸಂಬಂಧ ಹೊಂದಿದ್ದರೇ ಎಂಬುದು ಅವರಿಂದ ವಶಪಡಿಸಿಕೊಳ್ಳಲಾಗಿರುವ ಎಲೆಕ್ಟ್ರಾನಿಕ್ ಸಾಧನಗಳ ಪರೀಕ್ಷೆಯ ಆಧಾರದ ಮೇಲೆ ಸಿಎಫ್‌ಎಸ್‌ಎಲ್ ವರದಿ ಬಂದಮೇಲೆ ತಿಳಿಯಲಿದೆ.

ಬೆದರಿಕೆ ಕರೆಗಳು ಬಂದ ಕೂಡಲೇ ಸಹಾಯಕ್ಕಾಗಿ ಪೋಲೀಸರನ್ನು ಸಂಪರ್ಕಿಸಿದರೂ ಉದಯಪುರ ಪೊಲೀಸರು ಕನ್ಹಿಯಾ ಲಾಲ್‌ಗೆ ಸಹಾಯ ಮಾಡಲು ನಿರಾಕರಿಸಿದ್ದಾರೆ ಎಂಬುದನ್ನು ಎನ್‌ಐಎ ತನಿಖೆಯಲ್ಲಿ ಕಂಡುಕೊಂಡಿದೆ. ಜೂನ್ 20 ರ ರ್ಯಾಲಿಯ ನಂತರ, ಕನ್ಹಿಯಾ ಲಾಲ್‌ಗೆ ಅವನ ಹಂತಕ ಘೌಸ್ ಮೊಹಮ್ಮದ್ ಮತ್ತು ಅವನ ಸಹ ಇಸ್ಲಾಮಿಸ್ಟ್‌ಗಳು ಪ್ರತಿದಿನ ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದುಬಂದಿದೆ.

ಅದೇ ರೀತಿ, ಅಮರಾವತಿ ಪೊಲೀಸರು ಕೊಲೆಯಾದ ಕೂಡಲೇ ಇಬ್ಬರನ್ನು ಬಂಧಿಸಿದ್ದರೂ ಅದನ್ನು ಮೊದಲು ದರೋಡೆ ಎಂದು ಬಿಂಬಿಸಲು ಪ್ರಯತ್ನಿಸಿದರು ಹಾಗೂ ಅಮರಾವತಿ ಪೊಲೀಸ್ ಆಯುಕ್ತರು ಇದನ್ನು “ಕುರುಡು ಮತ್ತು ಸೂಕ್ಷ್ಮ” ಎಂದು ಸಮರ್ಥಿಸಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!