Wednesday, June 29, 2022

Latest Posts

ಲಸಿಕೆ ಪಡೆದ ಎರಡು ತಿಂಗಳಲ್ಲಿ ಪ್ರತಿಕಾಯ ಕಡಿಮೆಯಾಗುವ ಸಾಧ್ಯತೆ: ಲಂಡನ್ ವಿವಿ ಸಂಶೋಧಕರು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ವಿರುದ್ಧ ಹೋರಾಡಲು ನೀಡಲಾಗುತ್ತಿರುವ ಫೈಜರ್, ಆಸ್ಟ್ರಾಜೆನಿಕಾ ಲಸಿಕೆಯ ಪ್ರತಿಕಾಯಗಳ ಬಗ್ಗೆ ಸಂಶೋಧನೆಯೊಂದು ಶಾಕಿಂಗ್ ಸುದ್ದಿ ಹೊರ ಹಾಕಿದೆ.
ಹೌದು ಲಂಡನ್ ನ ವಿಶ್ವ ವಿದ್ಯಾಲಯದ ಸಂಶೋಧನೆ ನೀಡಿದ ಮಾಹಿತಿ ಪ್ರಕಾರ, ಫೈಜರ್, ಆಸ್ಟ್ರಾಜೆನಿಕಾ ಕೊರೋನಾ ಲಸಿಕೆಯ ಪ್ರತಿಕಾಯಗಳು 2-3 ತಿಂಗಳ ಬಳಿಕ ಇಳಿಕೆಯಾಗಲಿದೆ ಎಂಬ ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದೆ.
ಅದರಲ್ಲೂ ಈ ಲಸಿಕೆಗಳು 6-10 ವಾರಗಳ ನಂತರ ಶೇ.50ರಷ್ಟು ಪ್ರತಿಕಾಯವನ್ನು ಕಳೆದುಕೊಳ್ಳುತ್ತದೆ ಎಂದು ಸಂಶೋಧನೆ ತಿಳಿಸಿದೆ.
ಹೊಸ ವೈರಾಣು ತಳಿಗಳ ವಿರುದ್ಧ ಹೋರಾಡಲು ಇದ್ದ ಲಸಿಕೆಗಳಲ್ಲಿ ಪ್ರತಿಕಾಯ ಕಡಿಮೆಯಾಗುವುದು ಆತಂಕದ ವಿಚಾರ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಹಿನ್ನೆಲೆ 18 ವರ್ಷ ಮೇಲ್ಪಟ್ಟವರಿಗೆ ಹಾಗೂ 70 ವರ್ಷ ಮೇಲ್ಪಟ್ಟವರಿಗೆ ಅಗತ್ಯಕ್ಕೆ ತಕ್ಕಂತೆ ಬೂಸ್ಟರ್ ಡೋಸ್ ಗಳನ್ನು ನೀಡುವ ವ್ಯವಸ್ಥೆ ಮಾಡಬೇಕಾಗಿದೆ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss