Wednesday, July 6, 2022

Latest Posts

16 ವರ್ಷ ವಯಸ್ಸಿನವರ ಮೇಲೆ ಲಸಿಕೆ ಬಳಸಲು ‘ಫಿಜರ್’ ಅರ್ಜಿ ಸಲ್ಲಿಕೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಮೆರಿಕದ ಫಾರ್ಮಾ ಕಂಪನಿ ಫಿಜರ್ ತನ್ನ ಲಸಿಕೆಯನ್ನು 16 ವರ್ಷ ವಯಸ್ಸಿನವರ ಮೇಲೆ ಬಳಸಲು ಅರ್ಜಿ ಸಲ್ಲಿಸಿದೆ.
ಈ ಲಸಿಕೆಯನ್ನು ಫಿಜರ್ ಮತ್ತು ಬಯೋಟೆಕ್ ಒಟ್ಟಿಗೆ ತಯಾರಿಸಿದ್ದು, 16 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ನೀಡಲು ಪರವಾನಗಿಗಳಿಗಾಗಿ ಎರಡೂ ಕಂಪನಿಗಳು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ಗೆ ಅರ್ಜಿ ಸಲ್ಲಿಸಿವೆ. ಇದಕ್ಕೂ ಮೊದಲು, ಲಸಿಕೆಯನ್ನು 18 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಮಾತ್ರ ಬಳಸಲಾಗುತ್ತಿತ್ತು.
ಭಾರತದಲ್ಲಿಯೂ ಸಹ ತುರ್ತು ಬಳಕೆಗಾಗಿ ಫಿಜರ್ ಲಸಿಕೆ ಬಳಕೆಗೆ ಶೀಘ್ರದಲ್ಲೇ ಅವಕಾಶ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, ತನ್ನ ಲಸಿಕೆಯನ್ನ ಶೀಘ್ರದಲ್ಲೇ ಭಾರತದಲ್ಲಿ ಲಭ್ಯವಾಗುವಂತೆ ಮಾಡಲು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಫಿಜರ್‌ನ ಅಧ್ಯಕ್ಷ ಮತ್ತು ಸಿಇಒ ಆಲ್ಬರ್ಟ್ ಬುರ್ಲಾ ಸೋಮವಾರ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss