Wednesday, August 10, 2022

Latest Posts

ಬಡರೋಗಿಗಳ ಮೇಲೆ ಫಾರ್ಮಸಿ ಮಾಫಿಯ; ದೌರ್ಜನ್ಯ ತಡೆಗೆ ಸಹಕಾರ ರಂಗದಿಂದ ಜನರಿಕ್ ಮಳಿಗೆಗಳ ಸ್ಥಾಪನೆ

ಹೊಸ ದಿಗಂತ ವರದಿ, ಕೋಲಾರ:

ಬಡ ರೋಗಿಗಳ ಮೇಲೆ ಬಂಡವಾಳ ಶಾಹಿ ಫಾರ್ಮಸಿಗಳ ಮಾಲೀಕರು ನಡೆಸುತ್ತಿರುವ ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದ ಜನರಿಕ್ ಔಷಧಿ ಮಳಿಗೆಗಳನ್ನು ತೆರೆಯಲು ಯೋಜನೆ ರೂಪಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳಲು ಸಾರ್ವಜನಿಕರು ಮುಂದೆ ಬರಬೇಕು ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಕರೆ ನೀಡಿದರು.
ರಾಜ್ಯ ಸಹಕಾರ ಮಹಾ ಮಂಡಳ ನಿಯಮಿತ, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಡಿಸಿಸಿ ಬ್ಯಾಂಕ್ ಸಹಾಯೋಗದಲ್ಲಿ ಸೋಸೈಟಿಗಳ ಸಿಇಒಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಜನೌಷಧಿ ಕೇಂದ್ರ ಸ್ಥಾಪನೆ, ಎನ್‌ಪಿಎ, ಸಾಲ ವಸೂಲಾತಿ ಬಗ್ಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಬಡ ರೋಗಿಗಳ ರಕ್ಷಣೆಗಾಗಿ ಆರಂಭಿಸುತ್ತಿರುವ ಜನರಿಕ್ ಔಷಧಿ ಮಳಿಗೆಗಳ ವಿರುದ್ದ ಫಾರ್ಮಸಿ ಮಾಫಿಯ ಕೆಲಸ ಮಾಡುವ ಆತಂಕವಿದೆ, ಇದರ ವಿರುದ್ದ ಸಾರ್ವಜನಿಕರು ಎಚ್ಚರಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ದಿವಂಗತ ಅನಂತ್‌ಕುಮಾರ್ ಕೇಂದ್ರ ಸಚಿವರಾಗಿದ್ದಾಗ ರಾಜ್ಯದಲ್ಲಿ 300 ಜನರಿಕ್ ಮಳಿಕೆಗಳನ್ನು ಸ್ಥಾಪನೆ ಮಾಡಲು ಸಹಿ ಹಾಕಿದೆ. ಆದರೆ ರಾಜ್ಯದಲ್ಲಿ ಪ್ರಬಲ ಔಷಧಿ ಮಳೆಗೆಗಳವರು ಇದು ಕಾರ್ಯಗತವಾಗದಂತೆ ಸ್ವಾಹ ಮಾಡಿಬಿಟ್ಟರು.
ಇದರ ವಿರುದ್ದ ನಾನು ದೆಹಲಯ ಭಾರತೀಯ ಮೆಡಿಕಲ್ ಸೈನ್ಸ್ ಸಂಸ್ಥೆಗೆ ಹೋಗಿ ಫಾರ್ಮಸಿ ಮಾಫಿಯ ವಿರುದ್ಧ ಕ್ರಮಕೈಗೊಳ್ಳಲು ಪ್ರಯತ್ನ ಪಟ್ಟರೂ ಅಂದು ಯಾವುದೇ ಪ್ರಯೋಜನೆಯಾಗಲಿಲ್ಲ. ಆದರೆ ಇಂದು ನನ್ನ ಉದ್ದೇಶ ಈಡೇರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ, ಸಿಇಒ ಅವರನ್ನು ಕರೆಯಿಸಿ ಜಿಲ್ಲಾ, ತಾಲ್ಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರಿಕ್ ಔಷದಿ ಕೇಂದ್ರಗಳನ್ನು ತೆರೆಯಲು ಮಾತುಕತೆ ನಡೆಸಬೇಕು. ಇದರ ತಡೆಗೆ ಕೆಲವು ಅಂಗಡಿಗಳವರ ಪೂರ್ಣ ಪ್ರಯತ್ನ ಇರುತ್ತದೆ ಎಂದು ಎಚ್ಚರಿಸಿದರು.
ಹಾಲಿನೊಳಗೆ ವಿಷ ಬೇರಿಸಿಕೊಟ್ಟರೆ ಗೊತ್ತಾಗುವುದಿಲ್ಲ. ಮೋಸ ಹೋಗುತ್ತೆವೆ. ಆದರೆ ತಾಯಿ ಎದೆ ಹಾಲು ವಿಷ ಆದರೆ ಕಾಪಾಡಲಿಕ್ಕೂ ಆಗೋದಿಲ್ಲ, ಸರ್ಕಾರಿ ವ್ಯವಸ್ಥೆಯಲ್ಲಿ ಸಂಬಳಪಡೆದುಕೊಳ್ಳುತ್ತಿರುವ ಕೆಲವರು ಇಂತಹ ದಂಧೆ ಜತೆ ಶಾಮೀಲಾಗಿರುವ ಬಗ್ಗೆ ನೋವು ಅನುಭವಿಸಿದ್ದೇನೆ ಎಂದರು.

ಬಡವರ ಸಾಲಕ್ಕೆ ಮಾತ್ರ ಅಡಮಾನ
ಬ್ಯಾಂಕ್‌ಗಳಲ್ಲಿ ಬಡವರು ಸಾಲ ಪಡೆದುಕೊಳ್ಳಬೇಕಾದರೆ ಅಸ್ತಿ ಅಡಮಾನ ಇಡಬೇಕು. ಶ್ರೀಮಂತರು ಯಾವುದೇ ಅಡಮಾನ ಇಡಬೇಕಾಗಿಲ್ಲ.  100 ಕೋಟಿಗೂ ಅಧಿಕ ಸಾಲ ಪಡೆದುಕೊಳ್ಳಬೇಕಾದರೆ ಯಾವುದೇ ರೀತಿ ಆಸ್ತಿ ಅಡಮಾನ ಇಡಬೇಕಾಗಿಲ್ಲ. ಕೊನೆಗೆ ಅವರಿಂದ ದೊರೆಯುವುದು ತಿರುಪತಿ ತಿಮ್ಮಪ್ಪನ ಮೂರು ನಾಮವೇ ಎಂದು ವ್ಯಂಗ್ಯವಾಡಿದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸ್ತ್ರೀ ಶಕ್ತಿ ಸಂಘಗಳ ಮೂಲಕ ಮಹಿಳೆಯರನ್ನು ಆರ್ಥಿಕ ಸ್ವಾವಲಂಭಿಗಳಾಗಿ ಮಾಡಲು ಕ್ರಾಂತಿ ಮಾಡಿದ್ದೇವೆ. ಇದು ಯಾವುದೂ ಸಂಸತ್ ಸದಸ್ಯ, ಪ್ರಧಾನಿ, ಮುಖ್ಯಮಂತ್ರಿ,ಕೋರ್ಟ್‌ಗಳಿಗೆ ಕಾಣುತ್ತಿಲ್ಲ. ಆದರೆ ಮಹಿಳೆಯರು ಮಹಾ ಮಂಗಳಾರತಿ ಎತ್ತಿ ಬುದ್ದಿಕಲಿಸುತ್ತಾರೆ ಎಂದು ಹೇಳಿದರು.

ಸೊಸೈಟಿಗಳನ್ನು ಜಾಹಗೀರ್‌ಗೆ ನೀಡಿಲ್ಲ
ಬ್ಯಾಂಕ್‌ಗಳನ್ನು, ಸೋಸೈಟಿಗಳನ್ನು ಯಾರಿಗೂ ಜಾಹಗೀರಿಗೆ ಬರೆದುಕೊಟ್ಟಿಲ್ಲ. ಮುಖಂಡರ ನಡುವೆ ವೈಯುಕ್ತಿಕ ಭಿನ್ನಾಭಿಪ್ರಾಯಗಳು ಇದ್ದರೆ ಕೂತು ಬಗೆಹರಿಸಿಕೊಳ್ಳಿ. ವೈಯುಕ್ತಿಕ ವಿಚಾರಗಳಿಂದ ಬಡ ಹೆಣ್ಣು ಮಕ್ಕಳು, ರೈತರ ಮೇಲೆ ಕಲ್ಲು ಹಾಕಬೇಡಿ ಎಂದು ಕಿವಿಮಾತು ಹೇಳಿದರು.
ಚುನಾವಣೆಗಳ ಮೂಲಕ ಅಧಿಕಾರಕ್ಕೆ ಬರುವ ಉದ್ದೇಶದಿಂದ ಸದಸ್ಯತ್ವಕೊಡದೆ ಇರಬೇಡಿ. ಪ್ರತಿ ಹಳ್ಳಿಯ, ಪ್ರತಿ ಕುಟುಂಬದವರು ಸಹಕಾರಿ ರಂಗದ ಸದಸ್ಯತ್ವ ಪಡೆದುಕೊಳ್ಳಬೇಕು. ಇದರಿಂದ ಸಹಕಾರಿ ವ್ಯವಸ್ಥೆಯ ಪ್ರಾಮುಖ್ಯತೆ ಮತ್ತು ದೃಢತೆ ಅರಿವಾಗುತ್ತದೆ. ಹಿಂದೆ ಮನಮೋಹನ್ ಸಿಂಗ್ ಅವರು ಸಾಲ ಮನ್ನಾ ಮಾಡಿದಾಗ ಸಹಕಾರ ಬ್ಯಾಂಕ್‌ಗಳಿಗೆ ಸೌಕರ್ಯ ದೊರೆಯಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಆದು ಈಗೆ ಮುಂದುವರೆಸಿಕೊಂಡು ಹೋಗಿ ಎಂದು ಹೇಳಿದರು.
ದೆಹಲಿಯ ಗಡಿಯಲ್ಲಿ ರೈತರು 109ದಿನಗಳಿಂದ ಚಳವಳಿ ನಡೆಸುತ್ತಿದ್ದಾರೆ. 200 ಮಂದಿ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತ ಮಾತೆ ಮೇಲೆ ಪ್ರೀತಿ ಹೆಚ್ಚಾದಾಗ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದಾರೆ. ರಸಗೊಬ್ಬರ, ಕೃಷಿ ಸಾಮಾಗ್ರಿಗಳ ಬೆಲೆ ಹೆಚ್ಚಾಗಿದೆ. ಕಚ್ಚಾ ತೈಲ ಬೆಲೆ ಬ್ಯಾರಲ್ 120 ಇದ್ದಾಗ ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ 35 ಇತ್ತು, ಈಗ ಬ್ಯಾರಲ್ ದರ 96 ರೂ ಇದೆ. ಪೆಟ್ರೋಲ್, ಡಿಸೇಲ್ ಬೆಲೆ 100ರೂ ಅಗಿದೆ. ಬಡವರು, ರೈತರು ಸಾಯುತ್ತಿದ್ದರು ಸರ್ಕಾರದವರಿಗೆ ಲೆಕ್ಕಕ್ಕಿಲ್ಲದಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಡಿಸಿಸಿ ಬ್ಯಾಂಕಿನ ಹಿಂದಿನ ಪರಿಸ್ಥಿತಿ ನೆನಪಿಸಿಕೊಂಡರೆ ಬೇಸರವಾಗುತ್ತಿತ್ತು.
ಗೋವಿಂದಗೌಡರು ಅಧ್ಯಕ್ಷರಾಗಲು ನಾನು ಅಡ್ಡಿಪಡಿಸಿದೆ. ಆದರೆ ಈಗ ಅವರ ಸಾಧನೆ ಖುಷಿ ತಂದಿದೆ ಎಂದು ಶ್ಲಾಘಿಸಿದರು.
ಖಾಸಗಿ ಮಳಿಗೆಯಲ್ಲಿ ಸಿಗುವ ಔಷದಿ ಜನರಿಕ್ ಮಳಿಗೆಯಲ್ಲಿ ಸಿಗತ್ತೆ. ಬಡವರು ಜನರಿಕ್ ಮಳಿಗೆಯಲ್ಲೇ ಕಡಿಮೆ ಬೆಲೆಗೆ ಔಷದಿಗಳ್ನು ಖರೀದಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ವಹಿಸಿದ್ದು, ಶಾಸಕ ಕೆ.ಶ್ರೀನಿವಾಸಗೌಡ, ರಾಜ್ಯ ಸಹಕಾರ ಮಾರಾಟಮಹಾಮಂಡಳದ ಅಧ್ಯಕ್ಷ ಡಾ.ರಾಜೇಂದ್ರಕುಮಾರ್, ಸಹಕಾರಿ ಯೂನಿಯನ್ ಅಧ್ಯಕ್ಷ ಅ.ಮು.ಲಕ್ಷ್ಮೀನಾರಯಣ್, ಡಿಸಿಸಿ ಬ್ಯಾಂಕ್, ಸಹಕಾರಿ ಯೂನಿಯನ್ ನಿದೇಶಕರು,ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss