Wednesday, June 29, 2022

Latest Posts

ಫಿಲಿಪೈನ್ಸ್‌ ನಲ್ಲಿ ‘ಟೂಫೂನ್‌ ರೈ’ ಚಂಡಮಾರುತದ ಅಟ್ಟಹಾಸ: 375ಕ್ಕೇರಿಕದ ಸಾವಿನ ಸಂಖ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಫಿಲಿಪೈನ್ಸ್‌ ನಲ್ಲಿ ಅಪ್ಪಳಿಸಿದ ಟೂಫೂನ್ ರೈ ಚಂಡಮಾರುತ್ತಕ್ಕೆ ಇಡೀ ದೇಶವೇ ತತ್ತಿಸಿ ಹೋಗಿದ್ದು, ಸಾವಿನ ಸಂಖ್ಯೆ 375ಕ್ಕೆ ಏರಿಕೆಯಾಗಿದೆ.
ಪ್ರಬಲ ಗಾಳಿಯಿಂದ ಮನೆಗಳು, ಆಸ್ಪತ್ರೆಗಳು, ಶಾಲೆಗಳ ಛಾವಣೆ ನೆಲಕುಸಿದಿದ್ದು, ಹೋಟೆಲ್‌, ವಿಮಾನ ನಿಲ್ದಾಣ ಸೇರಿದಂತೆ ಹಲವು ಪ್ರಮುಖ ಕಡ್ಡಗಳು ಕೂಡ ಹಾನಿಗೊಳಗಾಗಿವೆ.

Residents gather by a collapsed house in Hernani town, Eastern Samar province on December 17, 2021
ಈಗಾಗಲೇ ಚಂಡಮಾರುತಕ್ಕೆ ತುತ್ತಾಗಿದ್ದ ಮೂರು ಲಕ್ಷಕ್ಕೂ ಹೆಚ್ಚಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ ದಿನೇ ದಿನೇ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ಈವರೆಗೆ 375 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಪಡೆಗಳು, ಕೋಸ್ಟ್‌ ಗಾರ್ಡ್‌ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹೆಚ್ಚಿನ ಸಹಾಯಕ್ಕೆ ಮಿಲಿಟರಿ ವಿಮಾನಗಳು, ಹಡಗುಗಳನ್ನು ಬಳಸಲಾಗುತ್ತಿದೆ.
ಇನ್ನು ಫಿಲಿಪೈನ್ಸ್‌ ನ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಪರಿಶೀಲನೆ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss