6,000 ಉದ್ಯೋಗ ಕಡಿತ ಘೋಷಿಸಿದ ಫಿಲಿಪ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆರ್ಥಿಕ ಹಿಂಜರಿತದ ಭೀತಿಯಿಂದ ತಂತ್ರಜ್ಞಾನ ಕ್ಷೇತ್ರ, ಕಾರ್ಪೋರೇಟ್‌ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗ ಕಡಿತಗಳು ಮುಂದುವರೆದಿದ್ದು ಇದೀಗ ತಂತ್ರಜ್ಞಾನ ಕಂಪನಿಯಾದ ಫಿಲಿಪ್ಸ್‌ 6000 ಉದ್ಯೋಗಿಗಳನ್ನು ಹೊರಹಾಕುವುದಾಗಿ ಹೇಳಿದೆ. ತನ್ನ ಲಾಭದಾಯಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕಂಪನಿಯು ಆಂತರಿಕವಾಗಿ ಕೆಲವು ಮರುಹೊಂದಾಣಿಕೆಗಳನ್ನು ಮಾಡುತ್ತಿದ್ದು ಇದರ ಭಾಗವಾಗಿ ತನ್ನ 5 ಶೇಕಡಾ ಉದ್ಯೋಗಿಗಳನ್ನು ಹೊರಹಾಕಲಿದೆ.

ಇತ್ತೀಚೆಗಷ್ಟೇ ಫಿಲಿಫ್ಸ್‌ ಕಂಪನಿಯು ತಯಾರಿಸಿದ್ದ ಉಸಿರಾಟದ ಸಾಧನಗಳನ್ನು ಹಿಂಪಡೆದಿದೆ. ಪರಿಣಾಮ ಕಂಪನಿಯ ಮಾರುಕಟ್ಟೆ ಮೌಲ್ಯವು 70 ಶೇಕಡಾದಷ್ಟು ಕುಸಿದಿದೆ. ಹೀಗಾಗಿ ಕಂಪನಿಯು ಲಾಭದಾಯಕತೆಯನ್ನು ಹೆಚ್ಚಿಸಲು ಉದ್ಯೋಗಿಳನ್ನು ಹೊರಹಾಕಲು ಮುಂದಾಗಿದೆ.

ಲಭ್ಯವಿರೋ ಮಾಹಿತಿಗಳ ಪ್ರಕಾರ ಒಟ್ಟಾರೆ 6,000 ಉದ್ಯೋಗಿಗಳನ್ನು ಹೊರಹಾಕಲು ಕಂಪನಿ ಯೋಚಿಸಿದ್ದು ಇದರಲ್ಲಿ ಅರ್ಧದಷ್ಟು ಉದ್ಯೋಗಿಗಳನ್ನು ಈ ವರ್ಷವೇ ಹೊರಹೋಗಲಿದ್ದಾರೆ. ಉಳಿದ ಅರ್ಧಷ್ಟು ಉದ್ಯೋಗಿಗಳು 2025ರವೆರಗೂ ಹಂತ ಹಂತವಾಗಿ ಹೊರಹೋಗಲಿದ್ದಾರೆ ಎಂದು ಕಂಪನಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!