VIRAL VIDEO| ಪ್ಯಾಂಟ್‌, ಅಂಗಿ ಜೇಬುಗಳಲ್ಲಿ ಮೊಬೈಲ್‌ ಇಡುವ ಮುನ್ನ ಜಾಗ್ರತೆ ಇರಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಬ್ಬ ವ್ಯಕ್ತಿ ಟೀ ಅಂಗಡಿಯಲ್ಲಿ ಕುಳಿತು ಟೀ ಕುಡಿಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಆತನ ಅಂಗಿಯ ಜೇಬಿನಲ್ಲಿದ್ದ ಫೋನ್ ಸ್ಫೋಟಿಸಿತು. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಘಾತದಿಂದ ಪಾರಾಗಿದ್ದಾರೆ.

ಇಲ್ಯಾಸ್ ಎಂಬ 76 ವರ್ಷದ ವ್ಯಕ್ತಿ ಕೇರಳದ ತ್ರಿಶ್ಶೂರ್ ಜಿಲ್ಲೆಯ ಮರೋಟ್ಟಿಚಾಲ್ ಚಹಾ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ದ ವೇಳೆ ಜೇಬಿನಲ್ಲಿದ್ದ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತು. ಗಾಬರಿಗೊಂಡ ಅವರು ತಕ್ಷಣ ಫೋನ್ ತೆಗೆದು ಕೆಳಗೆ ಎಸೆದರು. ಅಪಘಾತದಿಂದ ಸುರಕ್ಷಿತವಾಗಿ ಪಾರಾಗಿದ್ದಾರೆ. ಸದಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್‌ ಆಗುತ್ತಿದೆ.

ಇತ್ತೀಚೆಗಷ್ಟೇ ಕೋಝಿಕ್ಕೋಡ್‌ನಲ್ಲಿ ಇಂತಹದ್ದೇ ಘಟನೆ ನಡೆದಿದೆ. ಪ್ಯಾಂಟ್ ಜೇಬಿನಲ್ಲಿದ್ದ ವ್ಯಕ್ತಿಯೊಬ್ಬನ ಫೋನ್ ಸ್ಫೋಟಗೊಂಡು ಗಾಯಗೊಂಡಿದ್ದಾನೆ. ತ್ರಿಶೂರ್ ನಲ್ಲೂ ಮೊಬೈಲ್ ಸ್ಫೋಟಗೊಂಡು ಎಂಟು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಸರಣಿ ಫೋನ್ ಸ್ಫೋಟ ಘಟನೆಗಳು ಆತಂಕಕಾರಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!