Friday, December 9, 2022

Latest Posts

Photo Gallery| ಜಿ-20 ವಿಶ್ವ ನಾಯಕರ ಜತೆ ಪ್ರಧಾನಿ ಮೋದಿ- ಆತ್ಮವಿಶ್ವಾಸಿ ಭಾರತದ ಬಿಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಡೋನೇಷ್ಯಾದ ಬಾಲಿಯಲ್ಲಿ ಜಿ 20 ಶೃಂಗಸಭೆ ನಡೆಯುತ್ತಿದೆ. ಸಭೆಯ ಭಾಗವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಂಡೋನೇಷ್ಯಾಗೆ ಬಂದಿಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆಯ ನಾಯಕರನ್ನು ಭೇಟಿಯಾಗಿ ಆತ್ಮೀಯ ಮಾತುಕತೆ ನಡೆಸಿದರು. ಶೃಂಗಸಭೆಯಲ್ಲಿ ಭಾಗವಹಿಸುವ ನಾಯಕರ ಜೊತೆಗೆ ಹಲವಾರು ಇತರ ದೇಶಗಳ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.

  1. ನರೇಂದ್ರ ಮೋದಿ ಬಾಲಿಗೆ ಆಗಮಿಸುತ್ತಿದ್ದಂತೆ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೊಡೊ ಆತ್ಮೀಯ ಸ್ವಾಗತವನ್ನು ಕೋರಿದ್ರು. ಭೇಟಿಯ ಭಾಗವಾಗಿ ಪ್ರಮುಖ ಜಾಗತಿಕ ಸವಾಲುಗಳನ್ನು ನಿವಾರಿಸುವ ಮಾರ್ಗಗಳ ಕುರಿತು ವ್ಯಾಪಕವಾದ ಚರ್ಚೆಗಳಿಗೆ ಶೃಂಗಸಭೆ ಸಾಕ್ಷಿಯಾಗಲಿದೆ. ಇದು ಮತ್ತಷ್ಟು ಸಮರ್ಥನೀಯ ಅಭಿವೃದ್ಧಿಯ ಮಾರ್ಗಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದರು.
  2. ಅಮೆರಿಕಾ ಅಧ್ಯಕ್ಷ ಜೊ ಬಿಡೆನ್‌ ಪ್ರಧಾನಿಯನ್ನು ಆತ್ಮೀಯವಾಗಿ ಅಪ್ಪಿಕೊಂಡು ಮಾತುಕತೆ ನಡೆಸಿದರು.
  3. G20 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಫ್ರೆಂಚ್ ಅಧ್ಯಕ್ಷರಾದ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಸಂವಾದ ನಡೆಸಿದರು.
  4. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ನೆದರ್‌ಲ್ಯಾಂಟ್‌ ಪ್ರಧಾನಿ ಮಾರ್ಕ್ ರುಟ್ಟೆ ಬಾಲಿಯಲ್ಲಿ ಶೃಂಗಸಭೆ ವೇಳೆ ಆತ್ಮೀಯ ಭೇಟಿ
    Image
  5. ಭಾರತದ ಪ್ರಧಾನಿ ಮೋದಿ ಹಾಗೂ ಭಾರತೀಯ ಮೂಲದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಮೊದಲ ಭೇಟಿ. ಬಾಲಿ ಶೃಂಗಸಭೆಯಲ್ಲಿ  ಚರ್ಚೆImage
  6. ಆಫ್ರಿಕಾದಲ್ಲಿ ಪ್ರಮುಖ ಅಭಿವೃದ್ಧಿ ಪಾಲುದಾರರೊಂದಿಗೆ ಚರ್ಚೆ. ಸೆನೆಗಲ್ ಮತ್ತು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಮ್ಯಾಕಿ ಸಾಲ್‌ ಅವರೊಂದಿಗೆ ಸಂವಾದ Image

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!