ʻಯಾವಾಗ ಪೈಲಟ್ ಆಗುತ್ತೀಯʼ? ಅಮ್ಮನ 20 ವರ್ಷದ ಕನಸನ್ನು ನನಸು ಮಾಡಿದ ಮಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೆತ್ತವರು ತಮ್ಮ ಮಕ್ಕಳ ಬಗ್ಗೆ ಕನಸಿನ ಕೋಟೆಯನ್ನೇ ಕಟ್ಟಿರುತ್ತಾರೆ. ಒಳ್ಳೆ ಮಕ್ಕಳಾಗಿ, ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಿ, ದೊಡ್ಡ ಉದ್ಯೋಗಗಳಲ್ಲಿ ಸ್ಥಾನ ಪಡೆಯಬೇಕೆಂಬುದು ಪ್ರತಿಯೊಬ್ಬ ಪೋಷಕರ ಹಂಬಲ. ಸಾಮಾನ್ಯವಾಗಿ ತಮ್ಮ ಮಕ್ಕಳು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ನೀನು ಮುಂದೇನಾಗಬೇಕೆಂದಿದ್ದೀಯ ಎಂತ ಕೇಳಿ ತಿಳಿದು ಅದಕ್ಕೆ ಪೂರಕವಾಗಿ ವಿದ್ಯಾಭ್ಯಾಸ ಕೊಡಿಸುವುದೂ ಉಂಟು. ಹಾಗೆಯೇ ಒಬ್ಬ ತಾಯಿ ತನ್ನ ಮಗ ಶಾಲೆಯಲ್ಲಿ ಓದುತ್ತಿದ್ದಾಗ ತನ್ನ ಮಗ ಪೈಲಟ್ ಆಗಿ, ತನ್ನನ್ನು ಮೆಕ್ಕಾಗೆ ಕರೆದುಕೊಂಡು ಹೋಗಬೇಕು ಎಂದು ಕೇಳಿದ್ದಳಂತೆ.

ಆ ಹುಡುಗ ಬೆಳೆದು ದೊಡ್ವನಾದ ಮೇಲೆ ಕೊನೆಗೂ ಅಮ್ಮನ ಆಸೆಯನ್ನು ಈಡೇರಿಸಿದ್ದಾನೆ. ಈ ಬಗ್ಗೆ ಅವರು ಇತ್ತೀಚೆಗೆ ಟ್ವೀಟ್ ಮಾಡಿ ಶಾಲಾ ದಿನಗಳಲ್ಲಿ ನನ್ನ ತಾಯಿ ನನಗೆ ಚೀಟಿ ಬರೆದುಕೊಟ್ಟಿದ್ದರು. ನೀನು ಯಾವಾಗ ಪೈಲಟ್ ಆಗುತ್ತಿಯ ನೀನು ಓಡಿಸುವ ವಿಮಾನದಲ್ಲಿ ನನ್ನನ್ನು ಮಕ್ಕಾಕ್ಕೆ ಯಾವಾಗ ಕರೆದೊಯ್ಯುತ್ತೀರಿ ಎಂದು ಬರೆದುಕೊಟ್ಟಿದರಂತೆ.

ಅದರಂತೆ ಇಂದು ವಿಮಾನದಲ್ಲಿ ಪವಿತ್ರ ಕಾಬಾಕ್ಕೆ ಹೋಗುವ ಪ್ರಯಾಣಿಕರಲ್ಲಿ ನನ್ನ ತಾಯಿ ಕೂಡ ಒಬ್ಬರು. “ನಾನು ಆ ವಿಮಾನದ ಪೈಲಟ್” ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ತನ್ನ ಬಾಲ್ಯದಲ್ಲಿ ತಾಯಿ ಬರೆದಿದ್ದ ಕಾರ್ಡ್ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ತಾಯಿಯ ಕನಸನ್ನು ನನಸು ಮಾಡಿದ ಪೈಲಟ್‌ಗೆ ನೆಟಿಜನ್‌ಗಳು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. ಇದು ಪೈಲಟ್ ಜೀವನದ ಅತ್ಯುತ್ತಮ ಕ್ಷಣಗಳು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!