ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡಿಲೇಡ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ.
ಟೀಮ್ ಇಂಡಿಯಾ ಸೋಲಿನ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತಾಡಿದ್ದಾರೆ. ಇದು ನಮಗೆ ನಿರಾಶಾದಾಯಕ ವಾರ. ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಆಸ್ಟ್ರೇಲಿಯಾ ನಮಗಿಂತ ಚೆನ್ನಾಗಿ ಆಡಿದೆ. ಸಿಕ್ಕ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ನಾವು ವಿಶೇಷ ದಾಖಲೆ ಮಾಡಿದ್ದೆವು. ಪ್ರತಿ ಟೆಸ್ಟ್ ಪಂದ್ಯದಲ್ಲೂ ಹಲವಾರು ಸವಾಲುಗಳು ಇರುತ್ತವೆ. ಪಿಂಕ್ ಬಾಲ್‌ನೊಂದಿಗೆ ಆಡುವುದು ಸವಾಲಿನ ಆಟ ಎಂಬುದು ನಮಗೆ ಗೊತ್ತಿತ್ತು. ಗಬ್ಬಾದಲ್ಲಿ ನಡೆಯಲಿರೋ 3ನೇ ಟೆಸ್ಟ್ಗಾಗಿ ಎದುರು ನೋಡುತ್ತಿದ್ದೇವೆ ಎಂದರು.
ಪರ್ತ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕಾರಣದಿಂದಲೇ ಗೆದ್ದೆವು. ಅಡಿಲೇಡ್‌ನಲ್ಲಿ ಟೀಮ್ ಇಂಡಿಯಾದ ಆಟಗಾರರು ಚೆನ್ನಾಗಿ ಆಡಲಿಲ್ಲ. ಹಾಗಾಗಿ ಸೋತೆವು. ಇದರ ಕುರಿತು ಚರ್ಚೆ ಮಾಡುತ್ತೇವೆ ಎಂದರು.