ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇ-ಸಮೀಕ್ಷೆ ನಡೆಸಲು ಮೊಬೈಲ್, ಟ್ಯಾಬ್, ಡಾಟಾ ನೀಡುವಂತೆ ಒತ್ತಾಯಿಸಿ ಪಿಂಕ್ ಟೀಂ ಪ್ರತಿಭಟನೆ

ದಿಗಂತ ವರದಿ ಮಂಡ್ಯ :

ಇ-ಸಮೀಕ್ಷೆ ನಡೆಸಲು ಆಶಾ ಕಾರ‌್ಯಕರ್ತೆಯರಿಗೆ ಮೊಬೈಲ್, ಟ್ಯಾಬ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ‌್ಯಕರ್ತೆಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಬಳಿ ಜಮಾಯಿಸಿದ ಕಾರ‌್ಯಕರ್ತೆಯರು, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರೀಯ ಆರೋಗ್ಯಅಭಿಯಾನ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಕಳೆದ ಕೆಲ ದಿನಗಳಿಂದ ಮೊಬೈಲ್‌ನಲ್ಲಿ ಇ-ಸಮೀಕ್ಷೆ ಮಾಡಲು ಆಶಾ ಕಾರ‌್ಯಕರ್ತರುಗಳಿಗೆ ತರಬೇತಿ ನೀಡಲಾಗುತ್ತಿದೆ. ಇದನ್ನು ಮೊಬೈಲ್ ಆ್ಯಪ್ ಮೂಲಕ ಕಡಿಮೆ ಅವಧಿಯಲ್ಲಿ ಟಾರ್ಗೆಟ್ ನೀಡಿ ಸಮೀಕ್ಷೆ ಮಾಡಬೇಕು ಎಂದು ತಿಳಿಸಲಾಗಿದೆ. ಆಶಾ ಕಾರ‌್ಯಕರ್ತೆಯರು, ಅಂಗನವಾಡಿ ಕಾರ‌್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಮಾತ್ರ ಮನೆಗಳನ್ನು ಹಂಚಿ ಸಮೀಕ್ಷೆ ಮಾಡಲು ಹೇಳಿರುತ್ತಾರೆ. ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಅಂಗನವಾಡಿ ಕಾರ‌್ಯಕರ್ತೆಯರು ಇ-ಸಮೀಕ್ಷೆ ಮಾಡಲು ಸಧ್ಯಕ್ಕೆ ಆಗುವುದಿಲ್ಲ ಎಂದು ಹೇಳಿದ್ದರೂ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂದು ದೂರಿದರು.
ಇ-ಸರ್ವೆ ಮಾಡಲು ಮೊಬೈಲ್ ಮತ್ತು ಡಾಟಾ ನೀಡದೆ ಪೂರಕ ಸರ್ವೆ ಮಾಡಿಸಲು ಸಿಬ್ಬಂದಿಗಳು ಮುಂದಾಗಿದ್ದುಘಿ, ಆಶಾ ಬಳಿ ಮೊಬೈಲ್ ಇಲ್ಲವೆಂದರೆ ಹೊಸ ಮೊಬೈಲ್‌ನ್ನು ನಾಳೆಗೆ ಖರೀದಿ ಮಾಡಿಕೊಂಡು ಇ-ಸರ್ವೆ ಮಾಡಬೇಕು ಎಂದು ಸೂಚಿಸಿರುತ್ತಾರೆ. ಸರ್ವೆ ಮಾಡಲು ಆಗುವುದಿಲ್ಲವೆಂದರೆ ಗಂಡ-ಮಕ್ಕಳಿಂದ ಈ ಕೆಲಸ ಮಾಡಿಸಿ, ಇಲ್ಲವೇ ಕೆಲಸ ಬಿಡಿ ಎಂದು ಹೇಳತ್ತಾರೆ. ಸಧ್ಯಕ್ಕೆ ಕೊರೋನಾ ಪರಿಸ್ಥಿತಿಯಲ್ಲಿ ಹಲವಾರು ಕುಟುಂಬಗಳು ಸಂಕಷ್ಟದ ಸ್ಥಿತಿಯಲ್ಲಿವೆ. ಮೊಬೈಲ್ ಖರೀದಿಸಲು ಸಾವರಾರು ರೂ. ಬೇಕು. ಅದು ಅಸಾಧ್ಯ. ಈಗಾಗಲೇ ಕೆಲವರ ಬಳಿ ಮೊಬೈಲ್‌ಗಳು ಇದ್ದರೂ ಸಹ ಅವು ವೈಯಕ್ತಿಕ ಕೆಲಸಕ್ಕೆ ಇಟ್ಟುಕೊಂಡಿರುತ್ತಾರೆ. ಇಲಾಖಾ ಕೆಲಸಕ್ಕೆ ಇಲಾಖೆಯಿಂದ ಸೂಕ್ತ ವ್ಯವಸ್ಥೆ ಆಗಬೇಕು. ಹಾಗೆಯೇ ಪ್ರಮುಖ ಸರ್ವೆಗೆ ಸೂಕ್ತ ಸಂಭಾವನೆಯನ್ನೂ ನೀಡಬೇಕು ಎಂದು ಆಗ್ರಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss