spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ಸರ್ಕಾರಿ ಕಚೇರಿಯೊಳಗೆ ಕೈಯಲ್ಲಿ ಪಿಸ್ತೂಲ್​​​​ ಹಿಡಿದು ಪೋಸ್ ಕೊಟ್ಟ ಟಿಎಂಸಿ ನಾಯಕಿ!

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌

ತೃಣಮೂಲ ಕಾಂಗ್ರೆಸ್​​ ಪಕ್ಷದ ನಾಯಕಿ ಸರ್ಕಾರಿ ಕಚೇರಿಯೊಳಗೆ ಕೈಯಲ್ಲಿ ಪಿಸ್ತೂಲ್​​​​ ಹಿಡಿದುಕೊಳ್ಳುವ ಮೂಲಕ ಪೋಸ್​ ಕೊಟ್ಟಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​​​​ ಆಗಿದೆ.
ಪಶ್ಚಿಮ ಬಂಗಾಳದ ಮಾಲ್ಡಾ ಪಂಚಾಯತ್​​ ಸಮಿತಿ ಅಧ್ಯಕ್ಷೆ ಮತ್ತು ಅಲ್ಲಿನ ಟಿಎಂಸಿ ಮಹಿಳಾ ಮಂಡಲದ ಹಿರಿಯ ಮುಖಂಡೆ ಮೃಣಾಲಿನ್ ಮಂಡಲ್​ ಈ ರೀತಿಯಾಗಿ ನಡೆದುಕೊಂಡಿದ್ದಾರೆ.
ಮೃಣಾಲಿನ್ ಮಂಡಲ್​ ಬಿಡಿಒ ಕಚೇರಿಯಲ್ಲಿ ಕುಳಿತಿದ್ದಾಗ ಈ ರೀತಿಯಾಗಿ ನಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಇದರ ಫೋಟೋ ವೈರಲ್​​​ ಆಗುತ್ತಿದ್ದಂತೆ ತೃಣಮೂಲ ಕಾಂಗ್ರೆಸ್​ ಹಿಂಸಾಚಾರ ಸಂಸ್ಕೃತಿ ಪ್ರೋತ್ಸಾಹಿಸುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣೇಂದು ನಾರಾಯಣ ಚೌಧರಿ, ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು. ಇದರಿಂದ ಪ್ರಮುಖ ನಾಯಕರ ವ್ಯಕ್ತಿತ್ವಕ್ಕೂ ಧಕ್ಕೆ ಉಂಟಾಗುತ್ತದೆ ಎಂದಿದ್ದಾರೆ. ಇದರ ಬೆನ್ನಲ್ಲೇ ಟಿಎಂಸಿ ಪ್ರಕರಣದ ತನಿಖೆಗೆ ಆದೇಶಿಸಿದೆ.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap