ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………
ಹೊಸ ದಿಗಂತ ವರದಿ, ಶಿರಸಿ:
ಹೊಂಡಗಳಿಂದ ತುಂಬಿ ಸಂಚಾರಕ್ಕೆ ಅಯೋಗ್ಯವಾಗಿರುವ ತನ್ನ ಬಡಾವಣೆಯ ರಸ್ತೆಯನ್ನು ಸಾಮಾಜಿಕ ಕಾರ್ಯಕರ್ತರೋರ್ವರು ತನ್ನ ಸ್ವಂತ ಹಣ ಮತ್ತು ಶ್ರಮದ ಮೂಲಕ ದುರಸ್ತಿ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಇಲ್ಲಿಯ ನಾರಾಯಣಗುರು ನಗರದ ರಸ್ತೆಯಲ್ಲಿ ಹಲವು ಹೊಂಡಗಳು ಬಿದ್ದು ವಾಹನ ಸಂಚಾರರು , ಪಾದಚಾರಿಗಳು ವಿಪರೀತ ಬವಣೆಗೆ ಒಳಗಾಗಿದ್ದರು.
ಮಳೆಗಾಲದ ನೀರು ಹೊಂಡದಲ್ಲಿ ನಿಂತು ದಾರಿಹೋಕರಿಗೆ ರಾಡಿಜಲಾಭಿಷೇಕವಾಗುತ್ತಿತ್ತು. ಇದನ್ನು ನೋಡಿದ ಸಾಮಾಜಿಕ್ ಕಾರ್ಯಕರ್ತ ಜೀವನ್ ಪೈ ಹೊಂಡಗಳಲ್ಲಿ ಕಲ್ಲು ಮಣ್ಣು ತುಂಬಿ ದುರಸ್ತಿ ಕಾರ್ಯ ನಡೆಸಿದ್ದಾರೆ. ಇವರಿಗೆ ಸಹಾಯಕರಾಗಿ ಕಂಡಕ್ಟರ ಗಣಪತಿ ನಾಯ್ಕ ನೆರವಾಗಿದ್ದಾರೆ.