ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಸುಡಾನ್‌ನ ಪ್ರದೇಶವೊಂದರಲ್ಲಿ ಇಂದು ಸಂಜೆ ಟೇಕ್-ಆಫ್ ಆಗುವ ವೇಳೆ ವಿಮಾನ ಪತನಗೊಂಡಿದ್ದು,ಭಾರತೀಯರು ಸೇರಿದಂತೆ 20 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಚೀನಾದ ತೈಲ ಸಂಸ್ಥೆಯಾದ ಗ್ರೇಟರ್ ಪಯೋನೀರ್ ಆಪರೇಟಿಂಗ್ ಕಂಪನಿ ಚಾರ್ಟರ್ಡ್ ಮಾಡಿದ ಈ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಸೇರಿದಂತೆ 21 ಮಂದಿ ಇದ್ದರು ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಸೂಡಾನ್ ರಾಜಧಾನಿ ಜುಬಾದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ತೈಲ ಸೆಂಟರ್ ಬಳಿ ಟೇಕ್ ಆಫ್ ಆಗುತ್ತಿದ್ದಾಗ ವಿಮಾನ ಪತನಗೊಂಡಿದೆ.
ವಿಮಾನ ನಿಲ್ದಾಣದಿಂದ 500 ಮೀಟರ್ ದೂರದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಆಯಿಲ್ ರಿಚ್ ಯೂನಿಟಿಯ ಮಾಹಿತಿ ಸಚಿವ ಗಟ್ವೆಚ್ ಬಿಪಾಲ್ ಸಚಿವರು ದೂರವಾಣಿ ಮೂಲಕ ಎಎಫ್‌ಪಿಗೆ ತಿಳಿಸಿದ್ದಾರೆ.
ವಿಮಾನದಲ್ಲಿ 21 ಪ್ರಯಾಣಿಕರಿದ್ದರು. ಸದ್ಯಕ್ಕೆ ಒಬ್ಬರು ಮಾತ್ರ ಬದುಕುಳಿದಿದ್ದಾರೆ ಎಂದು ಸಚಿವರು ಹೇಳಿದ್ದಾರೆ . ಎಲ್ಲಾ ಪ್ರಯಾಣಿಕರು GPOC ಉದ್ಯೋಗಿಗಳಾಗಿದ್ದು, 16 ಪ್ರಯಾಣಿಕರು ದಕ್ಷಿಣ ಸುಡಾನ್ ಪ್ರಜೆಗಳು, ಇಬ್ಬರು ಚೀನೀ ಪ್ರಜೆಗಳು ಮತ್ತು ಒಬ್ಬರು ಭಾರತೀಯರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.