Tuesday, June 28, 2022

Latest Posts

ಕೊರೋನಾ ಬಂದು ಗುಣಮುಖರಾದವರು ದಯವಿಟ್ಟು ಪ್ಲಾಸ್ಮಾ ದಾನ ಮಾಡಿ: ನಟಿ ರಾಧಿಕಾ ರಾವ್ ಮನವಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಧಾ ಕಲ್ಯಾಣ’ ಧಾರಾವಾಹಿಯಲ್ಲಿ ನಾಯಕಿ ರಾಧಿಕಾ ರಾವ್ ಅವರಿಗೆ ಕೊರೋನಾ ಪಾಸಿಟಿವ್ ಬಂದು ಸದ್ಯ ಚೇತರಿಕೆ ಕಂಡುಕೊಂಡಿದ್ದಾರೆ.ಇದೀಗ ಅವರು ಕೊರೋನಾ ಬಂದು ಯಾರೆಲ್ಲಾ ಗುಣಮುಖರಾಗಿದ್ದೀರೋ ಅವರೆಲ್ಲಾ ದಯವಿಟ್ಟು ಪ್ಲಾಸ್ಮಾ ದಾನ ಮಾಡಿ ಎಂದು ಮನವಿ ಮಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿರುವ ನಟಿ, ಪ್ಲಾಸ್ಮಾ ದಾನ ಮಾಡುವುದು ಎಷ್ಟು ಅನಿವಾರ್ಯ ಎಂದು ವಿವರಿಸಿದ್ದಾರೆ.

‘ಯಾರಿಗೆಲ್ಲಾ ಕೊರೋನಾ ಪಾಸಿಟಿವ್ ಬಂದು ಗುಣವಾಗಿ 28 ದಿನ ಕಳೆದಿದೆಯೋ ಅವರೆಲ್ಲಾ ದಯವಿಟ್ಟು ಪ್ಲಾಸ್ಮಾ ದಾನ ಮಾಡಿ. ನನಗೂ ಪಾಸಿಟಿವ್ ಬಂದಿತ್ತು. ನಾನು ಇದೀಗ ಕೊವಿಡ್ ನಿಂದ ರಿಕವರಿ ಆಗಿ ಕೇವಲ 22 ದಿನ ಆಗಿದೆಯಷ್ಟೇ. 28 ದಿನ ಕಳೆದ ಕೂಡಲೇ ಪ್ಲಾಸ್ಮಾ ದಾನ ಮಾಡುತ್ತೇನೆ. ನಮ್ಮ ಕೈಯಲ್ಲಿ ಏನೆಲ್ಲಾ ಸಹಾಯ ಮಾಡಲು ಸಾಧ್ಯವಾಗುತ್ತದೋ ಅದನ್ನೆಲ್ಲಾ ನಾವು ಮಾಡೋಣ. ಇದರಿಂದ ಜನರ ಪ್ರಾಣ ಉಳಿಯುತ್ತದೆ’ ಎಂದು ಹೇಳಿದ್ದಾರೆ.

‘ಎಷ್ಟೋ ಜನರಿಗೆ ಮನಸ್ಸಿನಲ್ಲಿ ಹೆದರಿಕೆ ಇದೆ. ಪ್ಲಾಸ್ಮಾ ಕೊಟ್ಟರೆ ಮತ್ತೆ ಕೊರೋನಾ ಬರುತ್ತಾ, ಅಥವಾ ಬೇರೆ ಏನಾದರೂ ತೊಂದರೆಯಾಗುತ್ತಾ ಎಂಬ ಯೋಚನೆ ಹಲವರಿಗಿದೆ. ಏನೂ ಭಯ ಪಡಬೇಕಾಗಿಲ್ಲ. ನೀವು ಪ್ಲಾಸ್ಮಾ ದಾನ ಮಾಡಿದರೆ ಕೇವಲ ಒಂದು ದಿನದಲ್ಲಿ ಅದು ರಿಕವರಿ ಆಗುತ್ತೆ. ಜೊತೆಗೆ ಪ್ರತಿ 15 ದಿನಕ್ಕೊಮ್ಮೆ ನೀವು ಪ್ಲಾಸ್ಮಾ ದಾನ ಮಾಡಬಹುದು. ಇದರಿಂದ ಇನ್ನೊಬ್ಬರ ಬದುಕು ಉಳಿಸಬಹುದು’ ಎಂದು ರಾಧಿಕಾ ರಾವ್ ಹೇಳಿದ್ದಾರೆ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss