ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ನಟ ಸಲ್ಮಾನ್ ಖಾನ್ ಅಭಿನಯದ ರಾಧೆ ಸಿನೆಮಾವನ್ನು ಓಟಿಟಿಯಲ್ಲಿ ವಿಶೇಷ ಪ್ರದರ್ಶನಕ್ಕೆ ಬಿಡುಗಡೆ ಮಾಡಲಾಗಿದ್ದು, ಆದರೂ ಕೆಲವು ಪೈರೇಟೆಡ್ ಸೈಟ್ಗಳು ಈ ಚಿತ್ರವನ್ನು ಕಾನೂನುಬಾಹಿರವಾಗಿ ಸ್ಟ್ರೀಮ್ ಮಾಡುತ್ತಿದೆ.
ಈ ಕುರಿತು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದು, ‘ರಾಧೆ’ಯ ಪೈರೆಸಿಯಲ್ಲಿ ತೊಡಗದಂತೆ ಮನವಿ ಮಾಡಿದ್ದಾರೆ.
“ರಾಧೆ’ ಚಿತ್ರವನ್ನು ವೀಕ್ಷಣೆಗೆ 249 ರೂ.ಗಳಂತೆ ಸಮಂಜಸವಾದ ಬೆಲೆ ನಿಗದಿ ಮಾಡಲಾಗಿದೆ. ಆದಾಗ್ಯೂ ಕೆಲವು ಪೈರೇಟೆಡ್ ಸೈಟ್ಗಳು ಚಿತ್ರವನ್ನು ಕಾನೂನುಬಾಹಿರವಾಗಿ ಸ್ಟ್ರೀಮ್ ಮಾಡುತ್ತಿದ್ದು, ಅದು ದೊಡ್ಡ ಅಪರಾಧ. ಸೈಬರ್ ಸೆಲ್ನವರು ಪೈರೇಟೆಡ್ ಸೈಟ್ಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ನೀವು ಅದರಲ್ಲಿ ಶಾಮೀಲಾಗಿ ತೊಂದರೆಗೆ ಸಿಕ್ಕು ಹಾಕಿಕೊಳ್ಳಬೇಡಿ ಎಂದು ಎಚ್ಚರಿಕೆಯ ಪೋಸ್ಟ್ ಹಾಕಿದ್ದಾರೆ.
ರಾಧೆ ಚಿತ್ರದಲ್ಲಿ ಸಲ್ಮಾನ್ ಖಾನ್ ಪೊಲೀಸ್ ಅಧಿಕಾರಿಯ ಪಾತ್ರ ವಹಿಸಿದ್ದು, ಜಾಕಿ ಶ್ರಾಫ್, ದಿಶಾ ಪಟಾನಿ ಮತ್ತು ರಣದೀಪ್ ಹೂಡ ಮುಖ್ಯ ಪಾತ್ರಗಳಲ್ಲಿದ್ದಾರೆ.