spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಉಡುಪಿಯನ್ನೂ ಅನ್‌ಲಾಕ್ ಮಾಡಿ: ಶಾಸಕ ಕೆ. ರಘುಪತಿ ಭಟ್ ಮನವಿ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಉಡುಪಿ:

ರಾಜ್ಯದಲ್ಲಿ ಶೇ. 5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವಂಥ 16 ಜಿಲ್ಲೆಗಳಲ್ಲಿ ಅನ್‌ಲಾಕ್ ಮಾಡಲು ನೀಡಿದ ಆದೇಶದ ಜಿಲ್ಲೆಗಳ ಪಟ್ಟಿಯಲ್ಲಿ ಉಡುಪಿಯನ್ನು ಸೇರಿಸಿ ಅನ್‌ಲಾಕ್ ಮಾಡುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಕೋವಿಡ್ ಪರೀಕ್ಷೆ ನಡೆದಿದೆ. ಪ್ರಸ್ತುತ ದಿನಕ್ಕೆ 3ಸಾವಿರಕ್ಕೂ ಅಧಿಕ ಕೋವಿಡ್ ಪರೀಕ್ಷೆ ನಡೆಯುತ್ತಿದೆ. ಅದರಲ್ಲಿ ಶೇ. 5.02 ಪಾಸಿಟಿವಿಟಿ ದರ ಇರುವುದರಿಂದ ಉಡುಪಿ ಜಿಲ್ಲೆಯನ್ನು ಅನ್‌ಲಾಕ್ ಮಾಡಬಹುದು. ಕೇವಲ ಶೇ. 0.02 ಪಾಸಿಟಿವಿಟಿ ದರ ಹೆಚ್ಚಿರುವ ಕಾರಣಕ್ಕೆ ಲಾಕ್‌ಡೌನ್ ಮುಂದುವರಿಸುವುದು ಸರಿಯಲ್ಲ. ಆದ್ದರಿಂದ ಉಡುಪಿ ಜಿಲ್ಲೆಯಲ್ಲೂ ಅನ್‌ಲಾಕ್ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ, ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ. ಸುಧಾಕರ್ ಅವರಿಗೆ ಮನವಿ ಮಾಡಿದ್ದಾರೆ.
ಲಾಕ್‌ಡೌನ್ ಮುಂದುವರಿದರೆ ನಮ್ಮ ಜಿಲ್ಲೆಯ ಜನರಿಗೆ ಕಷ್ಟವಾಗುತ್ತದೆ. ಬಟ್ಟೆ, ಮೊಬೈಲ್, ಗ್ಯಾರೇಜ್, ಫ್ಯಾನ್ಸಿ ಮಳಿಗೆ ತೆರೆಯಲು ಬಹಳ ಬೇಡಿಕೆ ಇದೆ. ಸಣ್ಣ ವ್ಯಾಪಾರಸ್ಥರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೊಟೇಲ್, ಗೂಡಂಗಡಿ, ಸೆಲೂನ್ ನಡೆಸುವವರು ಸಮಸ್ಯೆಯಲ್ಲಿದ್ದಾರೆ. ಪುಸ್ತಕದಂಗಡಿ, ಬ್ಯೂಟಿ ಪಾರ್ಲರ್ ತೆರೆಯಬೇಕೆಂಬ ಒತ್ತಾಯವಿದೆ. ಅನ್‌ಲಾಕ್ ಮಾಡದಿದ್ದರೆ ಸರಕಾರದ ಮೇಲೆ ಜನರು ಬೇಸರಗೊಳ್ಳುತ್ತಾರೆ, ಅಷ್ಟೇ ಅಲ್ಲ ಸಂಕಷ್ಟದಲ್ಲಿರುವ ಜನರು ದಂಗೆ ಏಳುವ ಅಪಾಯವಿದೆ ಎಂದು ಶಾಸಕ ಭಟ್ ಎಚ್ಚರಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಶೇ.40ರಷ್ಟಿದ್ದ ಕೋವಿಡ್ ಪಾಸಿಟಿವಿಟಿ ದರ ಶೇ. 5ಕ್ಕೆ ಇಳಿಕೆ ಕಂಡಿದೆ. ಜನರ ತ್ಯಾಗದಿಂದ ಈ ಸಾಧನೆ ಸಾಧ್ಯವಾಗಿದೆ. ಧಾರ್ಮಿಕ, ಸಾಮಾಜಿಕ ಸಭೆಯ ಹೊರತುಪಡಿಸಿ ಇತರ ಚಟುವಟಿಕೆಗಳಿಗೆ ಅವಕಾಶ ನೀಡಬೇಕು. ಸುರಕ್ಷಿತ ವ್ಯಕ್ತಿಗತ ಅಂತರ, ಸ್ಯಾನಿಟೈಸರ್, ಮಾಸ್ಕ್ ಬಳಕೆ ಕಡ್ಡಾಯ ಮಾಡಿ ಅನ್‌ಲಾಕ್ ಮಾಡಬೇಕು. ವರ್ತಕರಿಗೆ ಸಂಜೆಯವರೆಗೂ ವಹಿವಾಟು ನಡೆಸಲು ಅವಕಾಶ ನೀಡಬೇಕು. ಈ ಸಂಬಂಧ ಸೋಮವಾರ ಮತ್ತೆ ಸಭೆ ಮಾಡಿ ಉಸ್ತುವಾರಿ ಸಚಿವರಿಗೆ ವಿನಂತಿ ಮಾಡುತ್ತೇವೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss