Monday, July 4, 2022

Latest Posts

ಒಂದೂವರೆ ಕೋಟಿ ರುಪಾಯಿಗಳಿಗೆ ಹರಾಜಾಯ್ತು ನೀರಜ್ ಚೋಪ್ರಾ ಜಾವೆಲಿನ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಭಾರತದ ಕ್ರೀಡಾಪಟು ನೀರಜ್ ಚೋಪ್ರಾ’ರ ಜಾವೆಲಿನ್ ಇ- ಹರಾಜಿನಲ್ಲಿ ಅತ್ಯಂತ ಹೆಚ್ಚಿನ ಬೆಲೆಗೆ ಹರಾಜಾಗಿದೆ.
ಭಾರತದ ಪ್ರಧಾನಿ ಮೋದಿಗೆ ಕೊಟ್ಟ ಉಡುಗೊರೆಯಾಗಿ ಪಡೆದ ಸ್ಮರಣಿಕೆಗಳ –ಹರಾಜಿನಲ್ಲಿ ನೀರಜ್ ಚೋಪ್ರಾರ ಜಾವೆಲಿನ್ 1.5 ಕೋಟಿ ರೂ.ಗೆ ಹರಾಜಾಗಿದೆ ಎಂದು ಭಾರತೀಯ ಸಂಸ್ಕೃತಿ ಸಚಿವಾಲಯ ತಿಳಿಸಿದೆ.
ಸೆ.17ರಿಂದ ಪ್ರಾರಂಭವಾದ ಹರಾಜು ಗುರುವಾರ ಅಂತ್ಯಗೊಂಡಿದ್ದು, ಈ ಹರಾಜಿಲ್ಲಿ ಒಟ್ಟು 1,348 ಸ್ಮರಣಿಕೆಗಳು ಇಡಲಾಗಿದ್ದು, ಅವುಗಳಿಗೆ 8600 ಬಿಡ್ ಗಳನ್ನು ಸ್ವೀಕರಿಸಲಾಗಿತ್ತು.
ಫೆನ್ಸರ್ ಭವಾನಿ ದೇವಿಯ ಕತ್ತಿ 1.25 ಕೋಟಿ ರೂ. ಬಿಡ್ ಪಡೆದಿದೆ. ಸುಮಿತ್ ಆಂಟಿಲ್ ಅವರ ಜಾವೆಲಿನ್ 1 ಕೋಟಿ ರೂ.ಗೂ ಹೆಚ್ಚು ಬಿಡ್ ಗಳಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss