`ಇಂದಿನ ಯುಗ ಯುದ್ಧವಲ್ಲ’: ಪುಟಿನ್‌ಗೆ ಮೋದಿ ಸಲಹೆ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿತ್ತರವಾದದ್ದು ಹೀಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಜ್ಬೇಕಿಸ್ತಾನದ ಸಮರ್‌ಕಂಡ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ನೇಪಥ್ಯದಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಉಕ್ರೇನ್ ಯುದ್ಧದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೀಡಿದ ಸಲಹೆಯು ಪ್ರಮುಖ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಗಮನವನ್ನು ಸೆಳೆದಿದೆ. “ಇಂದಿನ ಯುಗವು ಯುದ್ಧವಲ್ಲ ಅದರ ಬಗ್ಗೆ ನಿಮ್ಮೊಂದಿಗೆ ಫೋನ್ ಕರೆಯಲ್ಲಿ ಮಾತನಾಡಿದ್ದೇನೆ.‌ ಶಾಂತಿಯ ಹಾದಿಯಲ್ಲಿ ಹೇಗೆ ಪ್ರಗತಿ ಸಾಧಿಸಬಹುದು ಎಂಬುದರ ಕುರಿತು ಮಾತನಾಡಲು ನಮಗೆ ಅವಕಾಶ ಸಿಕ್ಕಿದೆ. ಉಕ್ರೇನ್‌ನಿಂದ ನಮ್ಮ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ನಮಗೆ ಸಹಾಯ ಮಾಡಿದ್ದಕ್ಕಾಗಿ ರಷ್ಯಾ ಮತ್ತು ಉಕ್ರೇನ್‌ಗೆ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದರು.

ಅಂತಾರಾಷ್ಟ್ರೀಯ ಮಾಧ್ಯಮಗಳು ಪಿಎಂ ಮೋದಿಯವರ ರಾಜತಾಂತ್ರಿಕ ಕುಶಾಗ್ರಮತಿಯನ್ನು ಶ್ಲಾಘಿಸಿ, ಅವರು ಸ್ನೇಹಪರ ಧ್ವನಿಯಲ್ಲಿ ಜಾಗತಿಕ ಸಮುದಾಯದ ಕಳವಳಗಳನ್ನು ರಷ್ಯಾಕ್ಕೆ ತಿಳಿಸಿದರು.

  • ಈ ಬಗ್ಗೆ ಅಮೆರಿಕನ್ ಪ್ರಕಟಣೆ -CNN ವಿಶ್ವ ರಾಜಕೀಯದಲ್ಲಿ ಪಿಎಂ ಮೋದಿ ಅವರ ಹಿಡಿತವನ್ನು ಶ್ಲಾಘಿಸಿ ವರದಿ ಮಾಡಿದೆ ಈಗ ಯುದ್ಧದ ಸಮಯವಲ್ಲ: ಭಾರತದ ನಾಯಕ ನರೇಂದ್ರ ಮೋದಿ ಪುಟಿನ್‌ಗೆ ಸಲಹೆ ಎಂದು ಪ್ರಕಟಿಸಿದೆ.
  • US ಪ್ರಕಟಣೆಯ ವಾಷಿಂಗ್ಟನ್ ಪೋಸ್ಟ್‌ನ ಶೀರ್ಷಿಕೆ ಹೀಗಿದೆ, ಉಕ್ರೇನ್‌ನಲ್ಲಿನ ಯುದ್ಧವನ್ನು ಮೋದಿ ಖಂಡಿಸಿದರು ಎಂದು ತಿಳಿಸಿದೆ.
  • ನ್ಯೂಯಾರ್ಕ್ ಟೈಮ್ಸ್ ತನ್ನ ಶೀರ್ಷಿಕೆಯಲ್ಲಿ ʻಈಗ ಯುದ್ಧದ ಯುಗವಲ್ಲ ಭಾರತದ ನಾಯಕನಿಂದ ಪುಟಿನ್‌ಗೆ ಸಲಹೆʼ
  • ಜಪಾನಿನ ಪ್ರಮುಖ ಪ್ರಕಟಣೆಯಾದ NHKಯ ಶೀರ್ಷಿಕೆಯು “ಭಾರತದ ಪ್ರಧಾನಿ ಮೋದಿಯವರು ಶಾಂತಿಯನ್ನು ಮುಂದುವರಿಸಲು ಪುಟಿನ್‌ಗೆ ಹೇಳಿದರು”
  • ಹಾಂಗ್ ಕಾಂಗ್ ಮೂಲದ ಪ್ರಮುಖ ದೈನಿಕ ಸೌತ್ ಚೀನಾ ಮಾರ್ನಿಂಗ್, ಇದು ‘ಯುದ್ಧದ ಸಮಯವಲ್ಲ’ ಎಂದು ಭಾರತದ ಮೋದಿ ರಷ್ಯಾದ ಪುಟಿನ್‌ಗೆ ಹೇಳಿದರು ಇದನ್ನು ಆದಷ್ಟು ಬೇಗ ಕೊನೆಗೊಳಿಸುವುದಾಗಿ ಪುಟಿನ್ ಪ್ರತಿಜ್ಞೆ ಮಾಡಿದರು ಎಂದು ವರದಿ ಮಾಡಿದೆ.
  • ಪೊಲಿಟಿಕೊ ಪ್ರಕಟಣೆಯಲ್ಲಿ ಇದು ‘ಯುದ್ಧದ ಯುಗವಲ್ಲʼ ಎಂದು ಭಾರತದ ನಾಯಕ ಪ್ರಧಾನಿ ಮೋದಿ ಪುಟಿನ್‌ಗೆ ಹೇಳಿದರು ಎಂದು ವರದಿ ಮಾಡಿದೆ.

ಪ್ರಾದೇಶಿಕ ಶೃಂಗಸಭೆಯ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಮುಖಾಮುಖಿ ಸಭೆಯಲ್ಲಿ ಪ್ರಧಾನಿ ಮೋದಿ ಈ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ರಾಜತಾಂತ್ರಿಕ ವೇದಿಕೆಯಲ್ಲಿ ರಷ್ಯಾದ ಹೆಚ್ಚುತ್ತಿರುವ ಪ್ರತ್ಯೇಕತೆಯನ್ನು ಎತ್ತಿ ತೋರಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!