ಹೊಸದಿಗಂತ ಆನ್ ಲೈನ್ ಡೆಸ್ಕ್:
ಮೂರು ದಿನಗಳ ಪ್ರವಾಸದ ಬಳಿಕ ಅಮೆರಿಕ ಪ್ರಧಾನಿ ಮೋದಿಗೆ 157 ಪುರಾತನ ವಸ್ತುಗಳು, ಶಿಲೆಗಳು, ಕಲಾಕೃತಿಗಳನ್ನು ಹಸ್ತಾಂತರಿಸಿದೆ.
12ನೇ ಶತಮಾನದ ಸೊಗಸಾದ ಕಂಚಿನ ನಟರಾಜ ಮತ್ತು 10ನೇ ಶತಮಾನದಿಂದ ಮರಳುಗಲ್ಲಿನ ರೇವಂಟಾದ ಒಂದೂವರೆ ಮೀಟರ್ ಬಾಸ್ ರಿಲೀಫ್ ಪ್ಯಾನಲ್ ವರೆಗಿನ ವಸ್ತುಗಳನ್ನು ಒಳಗೊಂಡಂತೆ ಪುರಾತನ ವಸ್ತುಗಳನ್ನು ಅಮೆರಿಕ ಭಾರತಕ್ಕೆ ವಾಪಸ್ ಕಳುಹಿಸುವುದಕ್ಕೆ ತಮ್ಮ ಮೆಚ್ಚುಗೆಯನ್ನು ತಿಳಿಸಿದ್ದಾರೆ.
ಕಳ್ಳತನ, ಅಕ್ರಮ ವ್ಯಾಪಾರ ಮತ್ತು ಸಾಂಸ್ಕೃತಿಕ ವಸ್ತುಗಳ ಕಳ್ಳ ಸಾಗಾಣಿಕೆಯನ್ನು ನಿಯಂತ್ರಿಸಲು ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬಿಡನ್ ಸರ್ಕಾರ ಬದ್ಧವಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಅಮೆರಿಕ ಹಸ್ತಾಂತರಿಸಿದ ಕಲಾಕೃತಿಗಳಲ್ಲಿ 71 ವಸ್ತುಗಳು ಸಾಂಸ್ಕೃತಿಕ ಕಲಾಕೃತಿಗಳಾಗಿದ್ದು, ಉಳಿದ 60 ಹಿಂದೂ ಧರ್ಮಕ್ಕೆ ಸೇರಿದ್ದು, ಬೌದ್ಧ ಧರ್ಮಕ್ಕೆ ಸಂಬಂಧಿಸಿದ 16 ಶಿಲೆಗಳು ಮತ್ತು ಜೈನ್ ಧರ್ಮಕ್ಕೆ ಸೇರಿದ 9 ಪ್ರತಿಮೆಗಳಿವೆ. ಲಕ್ಷ್ಮಿ ನಾರಾಯಣ, ಬುದ್ಧ, ವಿಷ್ಣು, ಶಿವ ಪಾರ್ವತಿ ಮತ್ತು 24 ಜೈನ ತೀರ್ಥಂಕರರ ಅಲಂಕೃತ ಮೂರ್ತಿಗಳನ್ನು ಮಾಡಲಾಗಿದೆ.