Saturday, April 1, 2023

Latest Posts

ಗುಜರಾತ್‌ನಲ್ಲಿ ದಾಖಲೆಯ ರೋಡ್‌ಶೋ ನಡೆಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಎರಡನೇ ಹಂತದ ಮತದಾನಕ್ಕೆ ಡಿ.1 ರಂದು ಅತ್ಯಂತ ದೀರ್ಘವಾದ ರೋಡ್‌ಶೋ ನಡೆಸಿದ್ದಾರೆ. ಭಾರತದ ರಾಜಕಾರಣಿಯೊಬ್ಬರು ಈವರೆಗೂ ನಡೆಸಿರುವ ಅತಿ ದೊಡ್ಡ ರೋಡ್‌ಶೋ ಇದಾಗಿದೆ. ಪ್ರಧಾನಿ ಮೋದಿ ತಮ್ಮ ತವರಿನಲ್ಲಿ 50 ಕಿ.ಮೀ ವ್ಯಾಪ್ತಿಯಲ್ಲಿ 16 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ದಾಖಲೆ ಮಾಡಿದ್ದಾರೆ.

ಬಿಜೆಪಿಗೆ ಗುಜರಾತ್ ಚುನಾವಣೆ ಪ್ರತಿಷ್ಠೆಯ ವಿಷಯ. ಸತತ ಏಳನೇ ಬಾರಿ ಅಧಿಕಾರಕ್ಕೇರಿ ದಾಖಲೆ ಸೃಷ್ಟಿಸುವ ತವಕದಲ್ಲಿದೆ ಬಿಜೆಪಿ. ನರೋಡಾ ಗಾಮ್‌ನಿಂದ ಪ್ರಧಾನಿ ಮೋದಿ ರೋಡ್ ಶೋ ಆರಂಭಿಸಿದ್ದು, ಗಾಂಧಿನಗರದಲ್ಲಿ ಅಂತ್ಯಗೊಂಡಿದೆ.

ಸತತ ನಾಲ್ಕು ಗಂಟೆಗಳ ಕಾಲ ರೋಡ್ ಶೋ ನಡೆದಿದೆ. ಈ ಚುನಾವಣೆಯಲ್ಲಿ ಇದು ಅತಿದೊಡ್ಡ ಕಾರ್ಯಕ್ರಮವಾಗಿದೆ. ರೋಡ್ ಶೋ ವೇಳೆ ಪಕ್ಷದ ಬಾವುಟ ಹಿಡಿದು ಲಕ್ಷಾಂತರ ಕಾರ್ಯಕರ್ತರು ಹೆಜ್ಜೆ ಹಾಕಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!