Saturday, August 13, 2022

Latest Posts

ಪದ್ಮ ಪ್ರಶಸ್ತಿಗೆ ಸೂಕ್ತವೆನಿಸುವ ಸಾಧಕರ ಹೆಸರು ಸೂಚಿಸಲು ಪ್ರಧಾನಿ ಮೋದಿ ಕರೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪದ್ಮ  ಪ್ರಶಸ್ತಿಗೆ ಸೂಕ್ತವೆನಿಸುವ ವ್ಯಕ್ತಿ ನಿಮಗೆ ತಿಳಿದಿದ್ದರೆ ಅಂಥವರ ಹೆಸರನ್ನು ಸೂಚಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಬಾರತದ ಹಲವು ಕ್ಷೇತ್ರತ್ರಗಳಲ್ಲಿ ಅನೇಕ ಪ್ರತಿಭಾವಂತ ವ್ಯಕ್ತಿಗಳಿದ್ದಾರೆ. ಅಸಾಧಾರಣ ಎನ್ನುವಂತಹ ಕೆಲಸಗಳನ್ನು ಮಾಡಿರುತ್ತಾರೆ. ಅಂತವರ ಬಗ್ಗೆ ಹೆಚ್ಚಿನದೇನು ಗೊತ್ತಿರುವುದಿಲ್ಲ. ಎಲೆಮರೆ ಕಾಯಿಯಂತಿರುತ್ತಾರೆ. ಅಂತಹ ಸ್ಪೂರ್ತಿದಾಯಕ ಜನರು ನಿಮಗೆ ತಿಳಿದಿದ್ದರೆ ನೀವು ಅವರನ್ನು #PeoplesPadma ಹ್ಯಾಶ್ ಟ್ಯಾಗ್ ಬಳಸಿ ನಾಮನಿರ್ದೇಶನ ಮಾಡಬಹುದು ಎಂದಿದ್ದಾರೆ.

ಸೆಪ್ಟೆಂಬರ್ 15 ರವರೆಗೆ ನಾಮನಿರ್ದೇಶನ  ತೆರದಿರುತ್ತದೆ ಎಂದಿದ್ದಾರೆ. ನಾಮ ನಿರ್ದೇಶನ ಮಾಡುವುದಕ್ಕಾಗಿ ಪದ್ಮ ಅವಾರ್ಡ್ಸ್ ವೆಬ್‌ಸೈಟ್‌ನ ಲಿಂಕ್ ಅನ್ನು ಸಹ ಅವರು ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss