Wednesday, July 6, 2022

Latest Posts

ಖುದ್ದು ಕೊಡೆ ಹಿಡಿದು ಬಂದ ಪ್ರಧಾನಿ: ಸಾಮಾಜಿಕ ತಾಣದಲ್ಲಿ ಅರಳಿತು ಚರ್ಚೆ 

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಪ್ರತಿಬಾರಿ ಸಂಸತ್ತಿನ ಅಧಿವೇಶನ ಪ್ರಾರಂಭವಾಗುವ ಮೊದಲು ಮಾಧ್ಯಮಗಳ ಎದುರು ಪ್ರಧಾನಿ ನಾಲ್ಕು ಮಾತುಗಳನ್ನಾಡುವುದು ರೂಢಿ. ಸೋಮವಾರ ಪ್ರಾರಂಭವಾದ ಮುಂಗಾರು ಅಧಿವೇಶನಕ್ಕೆ ಮುನ್ನವೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಕೆಲ ಸಚಿವ ಸಹೋದ್ಯೋಗಿಗಳ ಜತೆಯಲ್ಲಿ ಟಿವಿ ಕೆಮರಾ ಮತ್ತು ಮೈಕುಗಳ ಎದುರು ಬಂದು ಈ ಬಾರಿಯ ಅಧಿವೇಶನದ ಆಶಯದ ಬಗ್ಗೆ ಚುಟುಕಾಗಿ ಹೇಳಿದರು. ಹಾಗವರು ಮಾಧ್ಯಮದ ಎದುರು ಬಂದಾಗ ಮಳೆ ಸುರಿಯುತ್ತಿತ್ತಾದ್ದರಿಂದ ಕೊಡೆ ಹಿಡಿದು ಬಂದರು.

ಇದೀಗ ಪ್ರಧಾನಿ ಕೊಡೆ ಹಿಡಿದು ಬಂದ ರೀತಿಯೇ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಸಾಮಾನ್ಯವಾಗಿ ಹೀಗೆ ಕೊಡೆ ಹಿಡಿಯುವುದಕ್ಕೆ ಪ್ರಧಾನಿ ಮತ್ತು ಸಚಿವರಿಗೆ ಸಹಾಯಕರಿರುತ್ತಾರೆ. ಆದರೆ ಪ್ರಧಾನಿ ಸಹಿತ ಎಲ್ಲರೂ ತಾವೇ ಛತ್ರಿ ಹಿಡಿದು ಬಂದಿದ್ದು ಅಧಿಕಾರದ ಆಡಂಬರಗಳಿಂದ ದೂರವಿರುವ ಸರಳತೆಯ ನಡೆ ಎಂದು ಹಲವರು ಕೊಂಡಾಡಿದ್ದಾರೆ.

ಪ್ರಧಾನಿ ಮೋದಿಗೆ ಕೆಮರಾಗಳ ಮುಂದೆ ತಮ್ಮನ್ನು ಹೇಗೆ ಪ್ರಸ್ತುತಗೊಳಿಸಿಕೊಳ್ಳಬೇಕು ಎಂಬ ಚಾಣಾಕ್ಷ್ಯತೆ ಇದೆ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಅಂದಹಾಗೆ, ಮುಂಗಾರು ಅಧಿವೇಶನಕ್ಕೆ ಧಾವಿಸುತ್ತಿರುವ ರಾಹುಲ್ ಗಾಂಧಿಯವರಿಗೆ ಸಹಾಯಕರು ಕೊಡೆ ಹಿಡಿದಿರುವ ದೃಶ್ಯ ಇಲ್ಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss