ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿಯವರ ಶ್ರೀಲಂಕಾ ಭೇಟಿ ಪೂರ್ಣಗೊಂಡಿದ್ದು. ಇಂದು ಅನುರಾಧಪುರದಲ್ಲಿ ಮಹೋ-ಅನುರಾಧಪುರ ರೈಲು ಮಾರ್ಗ ಉದ್ಘಾಟಿಸಿದ್ದಾರೆ.
ಶ್ರೀಲಂಕಾ ಪ್ರವಾಸದ ಕೊನೆಯ ದಿನವಾದ ಇಂದು ಬೆಳಗ್ಗೆ ಅನುರಾಧಪುರಕ್ಕೆ ಭೇಟಿ ನೀಡಿ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರೊಂದಿಗೆ ಜಯ ಶ್ರೀ ಮಹಾ ಬೋಧಿ ದೇವಸ್ಥಾನಕ್ಕೆ ತೆರಳಿದ್ದರು. ಇದಾದ ನಂತರ, ಪ್ರಧಾನಿ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಮಹೋ-ಅನುರಾಧಪುರ ರೈಲು ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ.