Wednesday, July 6, 2022

Latest Posts

ಪ್ರಧಾನಿ ಮೋದಿ ವಿಶ್ವಕ್ಕೆ ಮಾದರಿ: ಸಚಿವ ಬಿ. ಶ್ರೀರಾಮುಲು

ಹೊಸದಿಗಂತ ವರದಿ, ಬಳ್ಳಾರಿ:

ಪ್ರಧಾನ ಮಂತ್ರಿ ಮೋದಿಜೀ ಅವರು, ವ್ಯಕ್ತಿಯಲ್ಲ, ಅವರೋಬ್ಬ ದೇಶದ ಶಕ್ತಿಯಾಗಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ನಗರದ ದೇವಿನಗರ ಬಡಾವಣೆಯ ಶ್ರೀ ರೇಣುಕಾ ಯಲ್ಲಮ್ಮ ದೇಗುಲ ಮುಂಭಾಗದಲ್ಲಿ ಭಾನುವಾರ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರಿಗೆ ಉಚಿತ ಇ ಶ್ರಮ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ‌ನೀಡಿ‌ ಮಾತನಾಡಿದರು. ಪ್ರಧಾನಿ ಮೋದಿಜೀ ಅವರು ಇಲ್ಲಿವರೆಗೆ ದೇಶದ ಅಭಿವೃದ್ಧಿಗೆ ಹಾಗೂ ದೇಶದ ಜನರ ಅಭಿವೃದ್ದಿಗಾಗಿ ಕೈಗೊಂಡ ಕ್ರಮಗಳನ್ನು ಇಡೀ ವಿಶ್ವದ ಜನರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಕೃಷಿಕರು, ವಿಶಿಷ್ಟಚೇತನರಿಗೆ, ವೃದ್ಧರಿಗೆ, ಮಹಿಳೆಯರಿಗೆ, ಯುವಕರಿಗೆ, ಗ್ರಾಮೀಣ ಭಾಗದ ನಾಗರಿಕರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದು ಇತರರಿಗೆ ಮಾದರಿಯಾಗಿದ್ದಾರೆ. ಬಿಡುವಿಲ್ಲದೇ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮೋದಿಜೀ ಅವರನ್ನು ಎಷ್ಟು ಕೊಂಡಾಡಿದರೂ ಸಾಲದು ಎಂದರು.
ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾರ್ಪೊರೇಟ್‌ಗಳು ಎಲ್ಲೋ ಸಮಯ ವ್ಯರ್ಥ ಮಾಡಲು ಮುಂದಾದರೆ, ನಮ್ಮ ಭಾರತೀಯ ಜನತಾ ಪಾರ್ಟಿಯ ಸೋಲು ಅನುಭವಿಸಿದ ಅಭ್ಯರ್ಥಿಗಳು ನಿತ್ಯ ಜನರ ಮಧ್ಯೆ ಉಳಿದು ಜನರ ಸೇವೆ ಮಾಡಲು ಮುಂದಾಗಿದ್ದಾರೆ, ಇದೇ ನಮಗೆ ನವರಿಗೆ ಇರುವ ವ್ಯತ್ಯಾಸ ಎಂದು ಕಾಂಗ್ರೆಸ್ ಸದಸ್ಯರ ವಿರುದ್ದ ಕಿಡಿಕಾರಿದರು.
ಚುನಾವಣೆಯಲ್ಲಿ ಸೋಲು ಅನುಭವಿಸಿದ ಎಲ್ಲ ನಮ್ಮ ಅಭ್ಯರ್ಥಿಗಳು ಸೇರಿ ಪ್ರಧಾನ ಮಂತ್ರಿಯವರ ಮಹತ್ವಕಾಂಕ್ಷಿ ಯೋಜನೆಯಾದ ಇ-ಶ್ರಮ ಕಾರ್ಡ್ ಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಮಾಡುತ್ತಿರುವುದು ಸಂತಸ‌ ಮೂಡಿಸಿದೆ. ಜಾತಿ, ಬೇಧ ವಿಲ್ಲದೇ ಪ್ರತಿಯೋಬ್ಬರೂ ಇದರ ಸೌಲಭ್ಯವನ್ನು ಪಡೆಯಲು ಮುಂದಾಗಬೇಕು. ಅಪಘಾತ ಸಂಭವಿಸಿದಾಗ ಒಂದು ಲಕ್ಷ, ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ ಎರಡು ಲಕ್ಷ ರೂ.ಗಳನ್ನು ಈ ಕಾರ್ಡ್ ನಿಂದ ಪಡೆಯಬಹುದು ಎಂದು ತಿಳಿಸಿದರು.

ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಮಾತನಾಡಿ, ಜಾತಿ ಮತಗಳ ತಾರತಮ್ಯ ಇಲ್ಲ, ಪ್ರತಿಯೋಬ್ಬರೂ ಇದರ ಸೌಲಭ್ಯ ಪಡೆಯಬಹುದು.
ಪ್ರಧಾನಿ ಮೋದಿಜೀ ಅವರು, ಯಾವುದೇ ಜಾತಿ, ಧರ್ಮ ನೋಡದೆ ಎಲ್ಲರಿಗೂ ಅನುಕೂಲವಾಗಲಿ ಎಂದು ಇ-ಶ್ರಮ ಕಾರ್ಡ್ ವಿತರಣೆ ಸೇರಿದಂತೆ ನಾನಾ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಜಾತಿ, ಮತ ಬಿಟ್ಟು ಎಲ್ಲರೂ ಒಂದಾಗಿ ಬಾಳಬೇಕು ಎಂದು ಮೋದಿಜೀ‌ಅವರು ಸಂಕಲ್ಪ ‌ಮಾಡಿದ್ದಾರೆ. ದೇಶದಲ್ಲಿ ಮತ್ತೊಂದು ರೂಪಾಂತರಿ ವೈರಸ್ ಓಮಿಕ್ರಾನ್ ಎಂಬ ಮಾರಣಾಂತಿಕ ಕಾಯಿಲೆ ಬಂದಿದೆ, ಈ ಹಿನ್ನೆಲೆಯಲ್ಲಿ ಎಲ್ಲರೂ ಜಾಗರೂಕತೆಯಿಂದ ಇರಬೇಕು, ಸರ್ಕಾರದ‌ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಮನವಿ ಮಾಡಿದರು.
ನಮ್ಮ ಸರ್ಕಾರ ಯಾವುದೇ ಜಾತಿ ಮತ ನೋಡದೆ ಕೆಲಸ ಮಾಡುತ್ತಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ 78 ಸಾವಿರ ಕಿಟ್‌ಗಳನ್ನು ಬಡವರಿಗೆ ನೀಡಲಾಗಿದೆ. ನಮ್ಮ ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿದವರಿಗೆ 10 ಕೆಜಿ ಅಕ್ಕಿ ನೀಡುತ್ತಿದೆ ಎಂದರು.
ವಾರ್ಡಿನಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಪಡೆಯಲು ವಾರ್ಡಿನಲ್ಲಿನ ಜನಸಂಪರ್ಕ ಕಚೇರಿ ಸ್ಥಾಪಿಸಿ ಮಾದರಿ ಕೆಲಸಗಳನ್ನು ಮಾಡಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಬಿಜೆಪಿ ಯುವ ಮುಖಂಡ ಅನೂಪ್ ಕುಮಾರ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಕಾರ್ಕಲತೋಟ ಪಾಲಣ್ಣ, ರಾಬಕೋ ಹಾಲು ಒಕ್ಕೂಟದ ನಿರ್ದೇಶಕರಾದ ವೀರಶೇಖರ ರೆಡ್ಡಿ, ಎಪಿಎಂಸಿ ಅಧ್ಯಕ್ಷ ಉಮೇಶ್, ಪಾಲಿಕೆ ಸದಸ್ಯರಾದ ಕೋನಂಕಿ ತಿಲಕ್ ಕುಮಾರ್, ಹನುಮಂತು ಗುಡಿಗಂಟೆ, ಬಿಜೆಪಿ ಮುಖಂಡರಾದ ವಿ.ಕೆ ಬಸಪ್ಪ, ಉಜ್ವಲ ಶ್ರೀಧರ್ ಸೇರಿದಂತೆ ವಾರ್ಡ್‌ ನ ಬಿಜೆಪಿ ಮುಖಂಡರು, ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss