ಬೀದರ್‌ಗೆ ಬಂದಿಳಿದ ಪ್ರಧಾನಿ ಮೋದಿ: ಬೃಹತ್‌ ಸಮಾವೇಶದಲ್ಲಿ ಭಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ವಿಧಾನಸಭೆ ಚುನಾಔಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಪ್ರಧಾನಿ ಮೋದಿಯವರು ಬೀದರ್‌ಗೆ ಬಂದಿಳಿದಿದ್ದಾರೆ.ಮೋದಿಯವರು ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೀದರ್​ ಏರ್​ಬೇಸ್​ಗೆ ಆಗಮಿಸಿ ಅಲ್ಲಿಂದ ಹುಮ್ನಾಬಾದ್​ ಹೆಲಿಪ್ಯಾಡ್​​​ಗೆ ಬಂದಿಳಿದರು. ಬಳಿಕ ರಸ್ತೆ ಮಾರ್ಗವಾಗಿ ಹುಮ್ನಾಬಾದ್​ ತಾಲೂಕಿನ ಚಿನಕೇರಾ ಕ್ರಾಸ್​​​ ಬಳಿ ಬಿಜೆಪಿ ಬೃಹತ್​ ಸಮಾವೇಶ ವೇದಿಕೆಗೆ ಆಗಮಿಸಿದರು.

ಇಲ್ಲಿ ನಡೆಯುತ್ತಿರುವ ಬೃಹತ್‌ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿಯಾದರು. ಮೋದಿಗೆ ಹೂವಿನ ಹಾರ ಪೇಟ ತೊಡಿಸಿ ಬಸವಣ್ಣರ ಫೋಟೋ ನೀಡಿ ಸ್ವಾಗತಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!