spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, October 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇ-ರುಪಿ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ: ಏನಿದರ ವಿಶೇಷತೆ?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಡಿಜಿಟಲೀಕರಣಕ್ಕೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಡಿಜಿಟಲ್ ಮೂಲಕ ಹಣ ಪಾವತಿ ಮಾಡುವ ಇ-ರುಪಿ ಸೇವೆಗೆ ಇಂದು ಚಾಲನೆ ನೀಡಿದ್ದಾರೆ.

ಈ ಆಯಪ್ ಅನ್ನು ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದೊಂದಿಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ರಚಿಸಿದೆ. ಇ-ರುಪಿ ಬಹಳ ವಿಶೇಷವಾಗಿದ್ದು, ಇದರ ಮೂಲಕ ಇಂಟರ್ನೆಟ್, ಸ್ಮಾರ್ಟ್​ಫೋನ್​ಗಳು ಇಲ್ಲದೆಯೂ ಹಣ ಪಾವತಿ ಮಾಡಲು ಸಾಧ್ಯವಿದೆ.

ಇಂದು ಈ ಇ-ರುಪಿ ಸೇವೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಆರಂಭಿಕವಾಗಿ ಈ ಸೇವೆ ಆರೋಗ್ಯಕ್ಕೆ ಸಂಬಂಧಿಸಿದ ಹಣ ಪಾವತಿಗೆ ಅನುಕೂಲವಾಗಲಿದೆ. ಖಾಸಗಿ ಕೇಂದ್ರಗಳಲ್ಲಿ ಹಣ ಪಾವತಿ ಮಾಡಿ ಕೊವಿಡ್ ಲಸಿಕೆ ಪಡೆಯುವವರು, ಅಥವಾ ಯಾರಾದರೂ ತಮ್ಮ ಸುತ್ತಮುತ್ತಲಿನ 100 ಜನರ ಕೋವಿಡ್ ಲಸಿಕೆಗೆ ಸಹಾಯ ಮಾಡುವವರಿದ್ದರೆ ಅವರು ಇ-ರುಪಿ ವೋಚರ್ ನೀಡಬಹುದು. ಆಗ ಆ ವೋಚರ್​ನಲ್ಲಿರುವ ಹಣವನ್ನು ಲಸಿಕೆಗೆ ಮಾತ್ರ ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಆಹಾರ ವಿತರಣೆ, ಆರೋಗ್ಯ ಸೇವೆಗಳು ಸೇರಿದಂತೆ ಬೇರೆ ವಲಯಗಳಿಗೆ ಈ ಇ-ರುಪಿ ಸೇವೆಯನ್ನು ಅಳವಡಿಕೆ ಮಾಡಲಾಗುವುದು ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.

ಸ್ಮಾರ್ಟ್​ಫೋನ್ ಇಲ್ಲದವರು ಎಸ್​ಎಂಎಸ್ ಅಥವಾ ಕ್ಯೂ ಆರ್ ಕೋಡ್ ಬಳಕೆ ಮಾಡಿ ಹಣವನ್ನು ಪಾವತಿ ಮಾಡುವ ಆಯ್ಕೆ ಇದರಲ್ಲಿದೆ. ಇದರಿಂದ ಇಂಟರ್ನೆಟ್ ವ್ಯವಸ್ಥೆ ಇಲ್ಲದ ಫೋನ್​ಗಳನ್ನು ಬಳಸುವವರಿಗೆ ಕೂಡ ಡಿಜಿಟಲ್ ಪೇಮೆಂಟ್​ಗೆ ಅನುಕೂಲವಾಗಲಿದೆ. ನೆಟ್ ಬ್ಯಾಂಕಿಂಗ್, ಆನ್​ಲೈನ್ ಪೇಮೆಂಟ್ ಆಯಪ್​ಗಳನ್ನು ಬಳಸದೆ ಸುಲಭವಾಗಿ ಹಣ ಪಾವತಿ ಮಾಡುವ ಆಯ್ಕೆಯೇ ಇ-ರುಪಿ. ಇದು ಇ-ವೋಚರ್ ಆಧಾರಿತವಾಗಿ ಕಾರ್ಯ ನಿರ್ವಹಿಸಲಿದೆ.

ಫೋನ್ ಪೇ, ಗೂಗಲ್ ಪೇ, ಪೇಟಿಎಂಗಳಿಗೆ ಇರುವಂತೆ ಇದಕ್ಕೂ ಯುಪಿಐ ಐಡಿ ಇರಲಿದೆ. ಕ್ಯೂಆರ್​ ಕೋಟ್ ಅಥವಾ ಎಸ್​ಎಂಎಸ್ ಆಧಾರಿತವಾದ ಇ-ವೋಚರ್ ಮೂಲಕ ಮೊಬೈಲ್ ಬಳಕೆದಾರರು ಹಣ ಪಾವತಿ ಮಾಡಬಹುದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss