ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಗುಜರಾತ್ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಇಂದು ಪ್ರಧಾನಿ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿಲಿದ್ದಾರೆ.
ಮಹೇಶನ-ವಾರೆಥಾ ವಿದ್ಯುದೀಕೃತ ರೈಲು ಮಾರ್ಗ, ಗಾಂಧಿನಗರ ರಾಜಧಾನಿ ರೈಲು ನಿಲ್ದಾಣ, ಮತ್ತು ಹೊಸದಾಗಿ ವಿದ್ಯುದೀಕರಣಗೊಂಡಿರುವ ಸುರೇಂದ್ರನಗರ್-ಪಿಪವಾವ್ ವಿಭಾಗಗಳು ಹೊಸ ಯೋಜನೆಗಳ ಭಾಗವಾಗಿವೆ.
ಗಾಂಧಿನಗರ ಮತ್ತು ವಾರಣಾಸಿಗೆ ಸಂಪರ್ಕ ಕಲ್ಪಿಸುವ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಮತ್ತು ಗಾಂಧಿನಗರ ಮತ್ತು ವಾರೆಥಾ ನಡುವೆ ದುರಸ್ತಿ ರೈಲುಗಳ ಸಂಚಾರಕ್ಕೆ ಪ್ರಧಾ ಮೋದಿ ಚಾಲನೆ ನೀಡಲಿದ್ದಾರೆ.
ಇದೇ ಸಮಯದಲ್ಲಿ, ಗುಜರಾತ್ ಸೈನ್ಸ್ ಸಿಟಿಯಲ್ಲಿನ ನೇಚರ್ ಪಾರ್ಕ್ ಹಾಗೂ ಅಕ್ವಾಟಿಕ್ಸ್ ಮತ್ತು ರೊಬೊಟಿಕ್ಸ್ ಗ್ಯಾಲರಿಯನ್ನೂ ಉದ್ಘಾಟಿಸಲಿದ್ದಾರೆ.
‘ಜುಲೈ 16ರ ಸಂಜೆ 4.30ಕ್ಕೆ ಗುಜರಾತ್ನಲ್ಲಿ ಆಸಕ್ತಿದಾಯಕ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಈ ಎಲ್ಲಾ ಯೋಜನೆಗಳು ಪರಿಸರ, ಪ್ರಕೃತಿ, ರೈಲ್ವೇ ಮತ್ತು ವಿಜ್ಞಾನ ವಿಭಾಗಗಳನ್ನೂ ಒಳಗೊಂಡಿವೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
At 4:30 PM tomorrow, 16th July, a range of interesting development works will be inaugurated in Gujarat. These works cover the environment, nature, railways and science.https://t.co/X9zvHqxEU7
— Narendra Modi (@narendramodi) July 15, 2021